ಪುತ್ತೂರಿನಲ್ಲಿ ನಾಪತ್ತೆಯಾದ ಯುವಕನ ಮೃತ ದೇಹ ಸುಳ್ಯದಲ್ಲಿ ಪತ್ತೆ

ಪುತ್ತೂರಿನಲ್ಲಿ ನಾಪತ್ತೆಯಾದ ಯುವಕನ ಮೃತ ದೇಹ ಸುಳ್ಯದಲ್ಲಿ ಪತ್ತೆ

LG   ¦    Feb 11, 2019 09:39:41 AM (IST)
ಪುತ್ತೂರಿನಲ್ಲಿ ನಾಪತ್ತೆಯಾದ ಯುವಕನ ಮೃತ ದೇಹ ಸುಳ್ಯದಲ್ಲಿ ಪತ್ತೆ

ಪುತ್ತೂರು: ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ದೇರ್ಲ ಅಜ್ಜಿಮನೆಯಿಂದ ನಾಪತ್ತೆಯಾದ ಯುವಕನೋರ್ವ ಸುಳ್ಯ ತಾಲೂಕು ಪೆರುವಾಜೆಯ ಕೊಡಿಯಾಲ ಗ್ರಾಮದಲ್ಲಿ ಮರವೊಂದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾದ ಘಟನೆ ಫೆ.10ರಂದು ಸಂಜೆ ಬೆಳಕಿಗೆ ಬಂದಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಪೆರುವಾಜೆ ಕೊಡಿಯಾಲ ಗ್ರಾಮದ ಬೇರಿಯ ನಿವಾಸಿ ಪಕೀರ ಎಂಬವರ ಪುತ್ರ ಅವಿವಾಹಿತ ಕೂಲಿ ಕೆಲಸ ಮಾಡುತ್ತಿದ್ದ ಗಣೇಶ್ ಬಿ(27ವ)ರವರು ಮೃತಪಟ್ಟವರು. 15 ವರ್ಷದ ಹಿಂದೆ ಗಣೇಶ್ ಅವರ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಗಣೇಶ್ ಸೇರಿದಂತೆ ಮೂವರು ಸಹೋದರರು ಕೆಯ್ಯೂರು ಗ್ರಾಮದ ದೇರ್ಲ ಕೆಟ್ಯಡ್ಕ ಎಂಬಲ್ಲಿ ತನ್ನ ಅಜ್ಜಿ, ಅಜ್ಜನ ಮನೆಯಲ್ಲೇ ವಾಸ್ತವ್ಯ ಹೊಂದಿದ್ದರು.

ಫೆ.6ರಂದು ಗಣೇಶ್ ಅವರು ತಂದೆ ಮನೆಗೆ ಹೋಗುವುದಾಗಿ ಸಂಜೆ ಮನೆಯಿಂದ ಹೊರಟವರು ತಂದೆ ಮನಗೆ ಹೋಗಿರಲಿಲ್ಲ ಎಂಬ ವಿಚಾರ ಸಹೋದರು ತಂದೆ ಮನೆಗೆ ಪೋನ್ ಮಾಡಿದಾಗ ವಿಚಾರ ಬೆಳಕಿಗೆ ಬಂದಿತ್ತು. ಗಣೇಶ್ ನಾಪತ್ತೆಯಾದ ಕುರಿತು ಸಹೋದರರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಫೆ. 10ರಂದು ಸಂಜೆ ಬೆಳ್ಳಾರೆ ಪೊಲೀಸ್ ಲಿಮಿಟ್‍ನಲ್ಲಿರುವ ಪೆರುವಾಜೆ ಕೊಡಿಯಾಲ ಬೋರಡ್ಕ ಎಂಬಲ್ಲಿ ಮರವೊಂದಕ್ಕೆ ನೈಲನ್ ಹಗ್ಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹ ಕೊಳೆತು ಹೋಗಿದ್ದು, ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ತೆರಳಿದ್ದಾರೆ. ಮೃತರ ಸಹೋದರ ಪ್ರಕಾಶ್ ಅವರ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.