ಸಂಸದ ನಳಿನ್ ಕುಮಾರ್ ಧರ್ಮಸ್ಥಳ- ಕನ್ಯಾಡಿಗೆ ಭೇಟಿ

ಸಂಸದ ನಳಿನ್ ಕುಮಾರ್ ಧರ್ಮಸ್ಥಳ- ಕನ್ಯಾಡಿಗೆ ಭೇಟಿ

DA   ¦    May 25, 2019 10:36:27 AM (IST)
ಸಂಸದ ನಳಿನ್ ಕುಮಾರ್ ಧರ್ಮಸ್ಥಳ- ಕನ್ಯಾಡಿಗೆ ಭೇಟಿ

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲಾ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲು ಅವರು ಶುಕ್ರವಾರ ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಧರ್ಮಾಧಿಕಾರಿ ಡಾ.ವೀರೆಂದ್ತ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕ್ಷೇತ್ರದ ವತಿಯಿಂದ ಡಾ. ಹೆಗ್ಗಡೆಯವರು ಸಂಸದರನ್ನು ಗೌರವಿಸಿದರು.

ಬಳಿಕ ಧರ್ಮಸ್ಥಳ ನಿತ್ಯಾನಂದ ನಗರ ಕನ್ಯಾಡಿ ಶ್ರೀರಾಮ ಸಂಸ್ಥಾನ್‍ಗೆ ಭೇಟಿ ನೀಡಿದರು. ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕ್ಷೇತ್ರದ ವತಿಯಿಂದ ಸ್ವಾಮೀಜಿಯವರು ಸಂಸದರನ್ನು ಗೌರವಿಸಿದರು.

ನಳಿನ್ ಕುಮಾರ್ ಅವರು ಶುಕ್ರವಾರ ಮಧ್ಯಾಹ್ನ ಕೊಕ್ಕಡಕ್ಕೆ ಆಗಮಿಸಿ, ಸೌತಡ್ಕ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ, ಬಳಿಕ ಅಲ್ಲಿಂದ ಧರ್ಮಸ್ಥಳ, ಕನ್ಯಾಡಿ, ಉಜಿರೆ, ಬೆಳ್ತಂಗಡಿ ಪಕ್ಷದ ಕಚೇರಿಗೆ ಆಗಮಿಸಿದರು. ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಭಾಜಪ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ, ಸೀತಾರಾಮ ಬೆಳಾಲು, ವಿಭಾಗ ಸಹಪ್ರಭಾರಿ ಪ್ರತಾಪ ಸಿಂಹ ನಾಯಕ್, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಂಡಲದ ಪದಾಧಿಕಾರಿ, ಜಿ.ಪಂ.,ತಾ.ಪಂ., ಪ.ಪಂ.ಸದಸ್ಯರು, ಗ್ರಾ.ಪಂ.ಸದಸ್ಯರುಗಳು, ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಇದ್ದರು.

More Images