ಬಡಕುಟುಂಬಗಳ ಆಸರೆಗೆ ನಿಂತ ‘ಹಿಂದು ಯುವಶಕ್ತಿ ಆಲಡ್ಕ’

ಬಡಕುಟುಂಬಗಳ ಆಸರೆಗೆ ನಿಂತ ‘ಹಿಂದು ಯುವಶಕ್ತಿ ಆಲಡ್ಕ’

DA   ¦    Sep 09, 2019 03:30:17 PM (IST)
ಬಡಕುಟುಂಬಗಳ ಆಸರೆಗೆ ನಿಂತ ‘ಹಿಂದು ಯುವಶಕ್ತಿ ಆಲಡ್ಕ’

ಬೆಳ್ತಂಗಡಿ: ಸಾಮಾನ್ಯ ಕುಟುಂಬದಲ್ಲಿ ಬೆಳೆದು ದಿನನಿತ್ಯದ ಜೀವನಕ್ಕಾಗಿ ಆದಾಯಮಾಡಿಕೊಂಡು ಅದರಲ್ಲಿನ ಒಂದಂಶವನ್ನು ಸಮಾಜದ ಬಡ ಕುಟುಂಬಗಳ ನೋವಿಗಾಗಿ ವಿನಿಯೋಗಿಸುತ್ತಿರುವ ಹಿಂದು ಯುವಶಕ್ತಿ ಆಲಡ್ಕ ಇವರ ಸೇವೆ ಅನುಕರಣೀಯ ಎಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮುಕ್ತೇಸರ ಶಿವಪ್ರಸಾದ್ ಅಜಿಲ ಹೇಳಿದ್ದಾರೆ.

ಅವರು ಭಾನುವಾರ ಮೇಲಂತಬೆಟ್ಟು ಎಂಬಲ್ಲಿ ಹಿಂದು ಯುವಶಕ್ತಿ ಆಲಡ್ಕ ಇವರು ಸುಜಾತ ಎಂಬುವರ ಬಡಕುಟುಂಬಕ್ಕೆ ನಿರ್ಮಿಸಿಕೊಟ್ಟ ಆಸರೆ -2 ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.

 ಮನೆ ನಿರ್ಮಿಸುವ ಮೂಲಕ ಮತ್ತು ಸಮಾಜದಲ್ಲಿನ ಕಟ್ಟಕಡೆಯ ಕುಟುಂಬಗಳು ಎಲ್ಲರಂತೆ ಜೀವಿಸಬೇಕು ಎಂಬ ಸಂಕಲ್ಪವನ್ನು ಮೂಲಕ ಮಾಡುವ ಸೇವೆಗೆ ಬೆಲೆಕಟ್ಟಲು ಅಸಾಧ್ಯ ಎಂದರು.

ಪತ್ರಕರ್ತ ಮನೋಹರ್ ಬಳಂಜ ಅವರು, ಹಿಂದು ಯುವಶಕ್ತಿ ಆಲಡ್ಕ ಸಂಘಟನೆಯು ಹಲವಾರು ವರ್ಷಗಳಿಂದ ತನ್ನದೇ ಆದ ಬಳಗವನ್ನು ರಚಿಸಿಕೊಂಡು ಎಳೆಮರೆಯ ಕಾಯಿಯಂತೆ ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ದುಡಿಮೆಯ ಒಂದಷ್ಟು ಸಮಯವನ್ನು ಹಾಗೂ ದುಡಿಮೆಯ ಒಂದಷ್ಟು ಹಣವನ್ನು ಸಮಾಜದ ಅಭಿವೃಧ್ಧಿಗಾಗಿ ವಿನಿಯೋಗಿಸಿರುವುದು ಅಭಿನಂದನೀಯ ಇಂತಹ ಸಂಘಟನೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಇದೇ ಸಂದರ್ಭದಲ್ಲಿ ಸಂಘಟನೆಗೆ ಪ್ರೋತ್ಸಾಹ ನಿಡುತ್ತಿರುವ ಹೊನ್ನಯ್ಯ ವೇಣೂರು ಇವರನ್ನು ಅಭಿನಂದಿಸಲಾಯಿತು. ಹಾಗೂ ಮನೆ ನಿರ್ಮಾಣಕ್ಕೆ ಸಹಕರಿಸಿದ ಸಂಘಟನೆಯ ವಿವಿಧ ಸದಸ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಭಾಸ್ಕರ ಗುರುಸ್ವಾಮಿ, ಹಿಂದು ಯುವಶಕ್ತಿ ಸಂಘಟನೆಯ ಅಧ್ಯಕ್ಷ ಸಂತೋಷ್ ಕಟ್ಟೆ, ರಾಜಕೇಸರಿ ಸಂಘಟನೆ ಸ್ಥಾಪಕಾಧ್ಯಕ್ಷ ದೀಪಕ್ ಜಿ. ಹುಣ್ಸೆಕಟ್ಟೆ ಉಪಸ್ಥಿತರಿದ್ದರು.

ಹಿಂದುಯುವಶಕ್ತಿ ಸಂಘಟನೆಯ ಸಂಚಾಲಕ ದೇವದಾಸ್ ಕಾಪಿನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.