ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಧರ್ಮಸ್ಥಳ

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಧರ್ಮಸ್ಥಳ

Savitha Naika   ¦    Dec 06, 2018 04:40:34 PM (IST)
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಧರ್ಮಸ್ಥಳ

ಉಜಿರೆ: ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ವಿಶೇಷವಾದ ಮಹತ್ವವನ್ನು ಹೊಂದಿದೆ. ಕಾರ್ತಿಕ ಮಾಸ ಕೃಷ್ಣ ಪಕ್ಷದ ಏಕಾದಶಿಯಿಂದ ಪ್ರಾರಂಭವಾಗುವ ಲಕ್ಷ ದೀಪೋತ್ಸವಕ್ಕೆ ಬೆಳಕಿನ ರಂಗೆ ವಿಶೇಷ. ಉಜಿರೆಯಿಂದ ಧರ್ಮಸ್ಥಳಕೆ ಸಾಗುವ ದಾರಿಯುದ್ದಕ್ಕೂ ವಿದ್ಯತ್ ದೀಪಗಳ ಬೆಳಕಿನ ಸಾಲುಗಳು ಭಕ್ತರನ್ನು ಸ್ವಾಗತಿಸುತ್ತವೆ. ರಂಗುರಂಗಿನ ದೀಪಾಲಂಕಾರದಿಂದ ಶ್ರೀ ಕ್ಷೇತ್ರ ಕಂಗೊಳಿಸುತ್ತಿದೆ.

ಶ್ರೀ ಮಂಜುನಾಥ ಕ್ಷೇತ್ರದವು ದೀಪೋತ್ಸವವು ಪ್ರಾರಂಭವಾದ ದಿನಗಳಿಂದ ಸಾವಿರಾರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.ಧಾರ್ಮಿಕ ಸೊಗಡಿನ ಲಕ್ಷದೀಪೋತ್ಸವ ವರ್ಷದ ಕೊನೆಯ ತಿಂಗಳಿನಲ್ಲಿ ಬರುತ್ತದೆ. ವಿವಿಧೆಡೆಯಿಂದ ಸಾವಿರಾರು ಭಕ್ತ ಸಮೂಹವೇ ಹರಿದು ಬರುತ್ತದೆ. ಭಕ್ತರಿಗೆ ದೀಪದಿಂದ ಅಲಂಕೃತವಾದ ಧರ್ಮಸ್ಥಳವನ್ನು ವೀಕ್ಷಿಸುವುದೇ ಒಂದು ಹಬ್ಬ.
ಧರ್ಮಸ್ಥಳದಲ್ಲಿ ಮುಖ್ಯದ್ವಾರದಲ್ಲಿ ಹಾಕಲಾದ ವಿದ್ಯುತ್ ದೀಪದಲ್ಲಿ ‘ಸುಸ್ವಾಗತ’ ಎಂದು ಬರೆದ ಅಕ್ಷರಗಳ ಸಾಲು ಬೆಳಕಿನ ಮೂಲಕವಾಗಿ ಚಲಿಸುತ್ತಾ ಭಕ್ತರನ್ನು ಸ್ವಾಗತಿಸುತ್ತದೆ. ದೇವರ ಸನ್ನಿಧಾನದ ಎದುರು ಹಾಕಿರುವ ವಿದ್ಯುತ್ ದೀಪಗಳಲ್ಲಿ ‘ಓಂ ನಮಃ ಶಿವಾಯ’, ‘ಲಕ್ಷದೀಪೋತ್ಸವಕ್ಕೆ ಸ್ವಾಗತ ‘,‘ಮಂಜುನಾಥಾಯ ನಮಃ’, ಇತ್ಯಾದಿ ಬರಹಗಳನ್ನೊಳಗೊಂಡ ರನ್ನಿಂಗ್ ಬಲ್ಬುಗಳು ಲಕ್ಷದೀಪೋತ್ಸವಕ್ಕೆಂದೆ ವಿಶೇಷವಾಗಿ ತಯಾರಾಗಿವೆ.

ವಸ್ತು ಪ್ರದರ್ಶನ, ಅಮೃತವರ್ಷಿಣಿ, ದೇವಾಲಯ, ನೇತ್ರಾವತಿ ನದಿ, ಕಟ್ಟಡಗಳು, ದೀಪಗಳಿಂದ ಕಂಗೊಳಿಸುತ್ತಿವೆ. ವಿವಿಧ ಬಣ್ಣಗಳನ್ನು ಹೊಂದಿದ ದೀಪ ವಿವಿಧ ವಿನ್ಯಾಸದಲ್ಲಿ ಬದಲಾಗುತ್ತಿರುತ್ತಿರುವ ಬೆಳಕು ನೋಡುಗರನ್ನು ಆಕರ್ಷಿಸುತ್ತದೆ.

ಲಕ್ಷಾಂತರ ದೀಪಗಳಂದ ಸಿಂಗಾರಗೊಂಡ ಧರ್ಮಸ್ಥಳ ನೊಡುಗರ ಮನವನ್ನು ಸೆಳೆಯುತ್ತಿದೆ.ಲಕ್ಷದೀಪೋತ್ಸವದ ಬೆಳಕು ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಚೆಲ್ಲುತ್ತಿದೆ. ಅಂಧಕಾರವನ್ನು ತೊರೆದು ಜ್ಞಾನವನ್ನು ನೀಡುವ ಧರ್ಮಜ್ಯೋತಿಯು ಲಕ್ಷದೀಪೋತ್ಸವವಾಗಿದೆ.

ವಿದ್ಯುತ್ ದೀಪಗಳನ್ನು ಸಿಂಗರಿಸಲು ದಿನಕ್ಕೆ 20 ಜನರಂತೆಕಾರ್ಯನಿರ್ವಹಿಸುತಿದ್ದಾರೆ. ದೀಪೋತ್ಸವ ಪ್ರಾರಂಭವಾಗುವ 15 ದಿನಗಳ ಮೊದಲೇ ದೀಪಗಳ ಅಲಂಕಾರದ ಕೆಲಸ ಪ್ರಾರಂಭವಾಗಿರುತ್ತದೆ. 12 ಜನರೇಟರ್ಗುಳನ್ನು ಅಳವಡಿಸಲಾಗಿದೆ. ಮಿರ್ಚಿ, ಹಲೋಜಿನ್, ಟ್ಯೂಬ್ ಲೈಟ್, ರನ್ನಿಂಗ್ ಲೈಟ್, ಗೂಡು ದೀಪಗಳಿಂದ ಶ್ರೀ ಕ್ಷೇತ್ರಅಲಂಕೃತಗೊಂಡಿದೆ.
ಧರ್ಮಸ್ಥಳಎಂಟು ಶತಮಾನಗಳ ಇತಿಹಾಸವನ್ನು ಹೊಂದಿದೆ.ಉತ್ಸವ, ಭಕ್ತಿ ಪರವಶತೆ, ಸಾಹಿತ್ಯ, ಸರ್ವಧರ್ಮೀಯತೆಎಲ್ಲದರ ಮಿಶ್ರಣ ಮನಸ್ಸನ್ನು ಹಿಡಿದಿಡುವಲ್ಲಿ ದೀಪಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಪರಂಪರೆಯಿಂದ ನಡೆದು ಬಂದ ಸಂಸ್ಕøತಿ ಧರ್ಮಾಧಿಕಾರಿಳಾದಡಾ.ಡಿ ವೀರೇಂದ್ರ ಹೆಗ್ಗಡೆಯವರು ಮನ್ನಡೆಸಿಕೊಂಡು ಬಂದಿದ್ದಾರೆ.

ಆರು ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವದಲ್ಲಿ ಪ್ರತಿನಿತ್ಯವುರಾತ್ರಿ ಸಮಯದಲ್ಲಿದೇವರಉತ್ಸವವಿರುತ್ತದೆ.ಕತ್ತಲು ಕವಿದಿರುವರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳ ನಡುವೆದೇವರನ್ನುಕಾಣುವುದೇ ಭಕ್ತರ ಸೌಭಾಗ್ಯವಾಗಿದೆ.
ಸವಿನಾ ನಾಯ್ಕ್