ಮಂಗಳೂರಿನಲ್ಲಿ ನಾಲ್ಕು ಮಂದಿಗೆ ಕೊವಿಡ್-19 ದೃಢ: ಜಿಲ್ಲಾಧಿಕಾರಿ

ಮಂಗಳೂರಿನಲ್ಲಿ ನಾಲ್ಕು ಮಂದಿಗೆ ಕೊವಿಡ್-19 ದೃಢ: ಜಿಲ್ಲಾಧಿಕಾರಿ

HSA   ¦    Mar 24, 2020 06:28:11 PM (IST)
ಮಂಗಳೂರಿನಲ್ಲಿ ನಾಲ್ಕು ಮಂದಿಗೆ ಕೊವಿಡ್-19 ದೃಢ: ಜಿಲ್ಲಾಧಿಕಾರಿ

ಮಂಗಳೂರು: ವಿದೇಶದಿಂದ ಬಂದಂತಹ ನಾಲ್ಕು ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಮಾಹಿತಿ ನೀಡಿದ್ದಾರೆ.

ಇದರಲ್ಲಿ ಒಬ್ಬ ಯುವಕ ಮಾ.20ರಂದು ದುಬೈನಿಂದ ಸ್ಪೈಸ್ ಜೆಟ್ ಮೂಲಕ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಮತ್ತೊಬ್ಬ 47ರ ಹರೆಯದ ವ್ಯಕ್ತಿ 19ರಂದು ದುಬೈನಿಂದ ಬಂದಿದ್ದು, ಶಂಕೆಯ ಮೇಲೆ ಅವರನ್ನು ವೆನ್ಲಾಕ್ ಗೆ ದಾಖಲಿಸಲಾಗಿತ್ತು.

70ರ ಹರೆಯದ ಮಹಿಳೆಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಸೌದಿಯಿಂದ ಮರಳಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದುಬೈನಿಂದ ಬಂದ ಭಟ್ಕಳದ ಯುವಕನಿಗೆ ಕೂಡ ಕೊವಿಡ್ -19 ಇರುವುದು ದೃಢಪಟ್ಟಿದೆ.