ಉಡುಪಿಯಲ್ಲಿ ಬಸ್ ನಿರ್ವಾಹಕನ ಬರ್ಬರ ಹತ್ಯೆ

ಉಡುಪಿಯಲ್ಲಿ ಬಸ್ ನಿರ್ವಾಹಕನ ಬರ್ಬರ ಹತ್ಯೆ

HSA   ¦    Jul 12, 2019 05:24:54 PM (IST)
ಉಡುಪಿಯಲ್ಲಿ ಬಸ್ ನಿರ್ವಾಹಕನ ಬರ್ಬರ ಹತ್ಯೆ

ಉಡುಪಿ: ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆಯು ಗುರುವಾರ ರಾತ್ರಿ ಇಲ್ಲಿನ ಬೈರಂಪಳ್ಳಿ ಎಂಬಲ್ಲಿ ನಡೆದಿದೆ.

ಕೊಲೆಗೀಡಾದವರನ್ನು ಬೈರಂಪಳ್ಳಿ ನಿವಾಸಿ ಪ್ರಶಾಂತ್ ಪೂಜಾರಿ(35) ಎಂದು ಗುರುತಿಸಲಾಗಿದೆ.

ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೈಕ್ ನಲ್ಲಿ ಬಂದ ವ್ಯಕ್ತಿಗಳಿಬ್ಬರು ಪ್ರಶಾಂತ್ ಪೂಜಾರಿ ಜತೆಗೆ ಜಗಳವಾಡಿ ಬಳಿಕ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.