ಸೇತುವೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಿಜೆಪಿ ಜನಪ್ರತಿನಿಧಿಗಳ ಬಹಿಷ್ಕಾರ

ಸೇತುವೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಿಜೆಪಿ ಜನಪ್ರತಿನಿಧಿಗಳ ಬಹಿಷ್ಕಾರ

GK   ¦    Dec 06, 2017 04:12:39 PM (IST)
ಸೇತುವೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಿಜೆಪಿ ಜನಪ್ರತಿನಿಧಿಗಳ ಬಹಿಷ್ಕಾರ

ಸುಳ್ಯ: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಂಗಡಿ ಮಜಲು ಎಂಬಲ್ಲಿ ಬಲ್ನಾಡು ಹೊಳೆಗೆ ಅಡ್ಡಲಾಗಿ ಮೂರು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಸೇತುವೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಬಿಜೆಪಿ ಜನಪ್ರತಿನಿಧಿಗಳು ಬಹಿಷ್ಕರಿಸಿದ ಘಟನೆ ಬುಧವಾರ ನಡೆದಿದೆ.

ಅರಂತೋಡು ಸೇತುವೆ ಶಿಲಾನ್ಯಾಸ ಕಾರ್ಯಕ್ರಮವನ್ನು ಬಿಜೆಪಿಯ ಜನಪ್ರತಿನಿಧಿಗಳು ಬಹಿಷ್ಕರಿಸಿದ ಕಾರಣ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಕಾಣಿಸಿಕೊಳ್ಳುವಂತಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕರು, ಅತಿಥಿಗಳಾಗಿದ್ದ ಸಂಸದರು, ಜಿ.ಪಂ.ಅಧ್ಯಕ್ಷರು, ತಾ.ಪಂ.ಅಧ್ಯಕ್ಷರು, ಸ್ಥಳೀಯ ಜಿ.ಪಂ., ತಾ.ಪಂ.ಸದಸ್ಯರು, ಗ್ರಾ.ಪಂ.ಅಧ್ಯಕ್ಷರು ಸೇರಿದಂತೆ ಎಲ್ಲಾ ಬಿಜೆಪಿ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಅಲ್ಲದೆ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಇತರ ಅತಿಥಿಗಳೂ ಹಾಜರಿರಲಿಲ್ಲ. ಅತಿಥಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತ್ರ ಹಾಜರಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದ್ದ 32 ಅತಿಥಿಗಳಲ್ಲಿ 31 ಮಂದಿ ಅತಿಥಿಗಳು ಗೈರು ಹಾಜರಾಗಿದ್ದರು.

ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ ಅವರು, ರಾಜ್ಯದಲ್ಲಿ ಆರ್ಥಿಕ ಸಮತೋಲನವನ್ನು ಸಾಧಿಸಲು ಸರ್ಕಾರ ಎಲ್ಲಾ ಪ್ರಯತ್ನವನ್ನೂ ಮಾಡಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಜೊತೆಗೆ ಉಚಿತ ಅಕ್ಕಿ ಕೊಡುವ ಮೂಲಕ ಹಸಿವುಮುಕ್ತ ರಾಜ್ಯವನ್ನು ರೂಪಿಸಲು ಸಾಧ್ಯವಾಗಿದೆ. `ಅಪೆಂಡಿಕ್ಸ್ ಇ'ಯಲ್ಲಿ ಪ್ರತಿ ಶಾಸಕರಿಗೆ ಅಭಿವೃದ್ಧಿಗೆ 20 ಕೋಟಿ ರೂವನ್ನು ನೀಡುವುದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 20 ಕಿ.ಮಿ.ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದೆ. ಮೀಸಲು ಕ್ಷೇತ್ರ ಎಂಬ ಕಾರಣಕ್ಕೆ ಸುಳ್ಯ ಕ್ಷೇತ್ರಕ್ಕೆ 30 ಕಿ.ಮಿ. ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದೆ ಎಂದರು.

More Images