ಶಾಲಾ ಕ್ರೀಡಾಂಗಣಕ್ಕೆ ಹಾಕಿದ್ದ ಬೇಲಿ ಕಿತ್ತೆಸೆದ ಜನರು

ಶಾಲಾ ಕ್ರೀಡಾಂಗಣಕ್ಕೆ ಹಾಕಿದ್ದ ಬೇಲಿ ಕಿತ್ತೆಸೆದ ಜನರು

DV   ¦    Oct 12, 2017 07:23:48 PM (IST)
ಶಾಲಾ ಕ್ರೀಡಾಂಗಣಕ್ಕೆ ಹಾಕಿದ್ದ ಬೇಲಿ ಕಿತ್ತೆಸೆದ ಜನರು

ಬೆಳ್ತಂಗಡಿ: ಸಂಘಟನೆಯೊಂದು ಶಾಲಾ ಕ್ರೀಡಾಂಗಣಕ್ಕೆ ಬೇಲಿ ಹಾಕಿದ್ದನ್ನು ಸಾರ್ವಜನಿಕರು ಕಿತ್ತೆಸೆಯಲು ಯತ್ನಿಸಿದಾಗ ಉದ್ವಿಗ್ನ ವಾತಾವರಣ ಉಂಟಾಗಿರುವ ಘಟನೆ ಮಡಂತ್ಯಾರು ಸನಿಹದ ಮಾಲಾಡಿ ಎಂಬಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಮಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣವು 1966ರಿಂದ ಶಾಲೆಯ ಕ್ರೀಡಾಂಗಣವಾಗಿ ಬಳಸಲಾಗುತ್ತಿತ್ತು. ಡಿಎಸ್ಎಸ್ ಎಂಬ ಸಂಘಟನೆಯೊಂದು ಮಾಹಿತಿ ಹಕ್ಕಿನಲ್ಲಿ ಈ ಭೂಮಿಯ ಬಗ್ಗೆ ಮಾಹಿತಿ ಪಡೆದು ಇದು ಡಿ.ಸಿ.ಮನ್ನಾ ಭೂಮಿಯಾಗಿದ್ದು, ಇದನ್ನು ದಲಿತರಿಗೆ ಬಿಟ್ಟು ಕೊಡಬೇಕು ಎಂದು ಬೇಲಿ ಹಾಕಿತ್ತು.

ಗುರುವಾರ ಶಾಲೆಗೆ ಸಂಬಂಧಪಟ್ಟವರು, ಗ್ರಾಮಸ್ಥರು ಸೇರಿ ಜೆಸಿಬಿ ಯಂತ್ರ ತರಿಸಿ ಬೇಲಿ ತೆರವು ಮಾಡಲು ಮುಂದಾದಾಗ ಡಿಎಸ್ಎಸ್ ಪ್ರತಿಭಟಿಸಿ ತಡೆಯೊಡ್ಡಿತ್ತು. ಈ ಸಂದರ್ಭ ತೀವ್ರ ವಾಗ್ವಾದವೇ ನಡೆಯಿತು.

ಈ ಬಗ್ಗೆ ಶಾಲೆ ವತಿಯಿಂದ ಜಿಲ್ಲಾಧಿಕಾರಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಗೆ, ತಹಸೀಲ್ದಾರ್, ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಸಿಆರ್ ಎಫ್ ತುಕುಡಿಯನ್ನು ನಿಯೋಜಿಸಲಾಗಿತ್ತು. ಬಳಿಕ ಜೆಸಿಬಿ ಮೂಲಕ ತೋಡಿದ ಚರಂಡಿಯನ್ನು ಮುಚ್ಚಿಸಲಾಗಿದೆ.