ಯಲ್ಲಾಪುರದಲ್ಲಿ ಟ್ರಾಕ್ಟರ್ ಉರುಳಿ ಓರ್ವ ಸ್ಥಳದಲ್ಲೇ ಸಾವು ಮೂವರು ಗಂಭೀರ

ಯಲ್ಲಾಪುರದಲ್ಲಿ ಟ್ರಾಕ್ಟರ್ ಉರುಳಿ ಓರ್ವ ಸ್ಥಳದಲ್ಲೇ ಸಾವು ಮೂವರು ಗಂಭೀರ

SB   ¦    Mar 13, 2018 09:54:42 AM (IST)
ಯಲ್ಲಾಪುರದಲ್ಲಿ ಟ್ರಾಕ್ಟರ್ ಉರುಳಿ ಓರ್ವ ಸ್ಥಳದಲ್ಲೇ ಸಾವು ಮೂವರು ಗಂಭೀರ

ಕಾರವಾರ: ಟ್ರಾಕ್ಟರ್ ಅರಬೈಲ್ ಘಟ್ಟದ ಯು ಟರ್ನ್ ಬಳಿ ಉರುಳಿ ಬಿದ್ದ ಪರಿಣಾಮ ಟ್ರಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದೆ.

ಟ್ರಾಕ್ಟರ್ ಟ್ರಾಲರ್ ದೊಂದಿಗೆ ,ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರನ್ನು ಹಾಗೂ ಸಾಮಾಗ್ರಿಗಳನ್ನು ಸಾಗಿಸುತ್ತಿತ್ತು, ರಾ.ಹೆ 63ರ ಅರಬೈಲ್ ಘಟ್ಟದ ಯೂ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಗುಡ್ಡದ ಮೇಲೆ ಹತ್ತಿದೆ. ನಂತರ ಹಿಂಬದಿ ಮುಖದಲ್ಲಿ ಚಲಿಸಿ ಉರುಳಿ ಬಿದ್ದಿದೆ.

ಘಟನೆಯಲ್ಲಿ ಹುಬ್ಬಳ್ಳಿಯ ಗುಡಗೇರಿ ನಿವಾಸಿ ಶಿವು ಎಂಬಾತ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ, ದೇವೇಂದ್ರಪ್ಪ ಗುರಪ್ಪ ದಂಡೀನ (32), ಶೇಖಪ್ಪ ಪಾಳ್ಯೇ(52), ಹುಬ್ಬಳ್ಳಿ ರಾಮನಗರ ನಿವಾಸಿ ಮಂಜುನಾಥ ಚಂದ್ರಪ್ಪ ಚಲವಾದಿ(26) ಈ ಮೂವರು ತೀವ್ರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಗುಳ್ಳಾಪುರದ 108 ಅಂಬುಲೇನ್ಸ್ ಮೂಲಕ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಕ್ಟರ್ ನಲ್ಲಿ ನಾಲ್ವರು ಗುಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕೆಲಸಕ್ಕೆ ಹುಬ್ಬಳ್ಳಿಯಿಂದ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.