ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆ: ಆಳ್ವಾಸ್ ಚಾಂಪಿಯನ್

ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆ: ಆಳ್ವಾಸ್ ಚಾಂಪಿಯನ್

Oct 12, 2017 06:40:33 PM (IST)
ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆ: ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಉಪ್ಪಿನಂಗಡಿಯ ಸರ್ಕಾರಿ ಮಾದರಿ ಪ್ರೌಢಶಾಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆಳ್ವಾಸ್‍ನ ಪವನ್ ಯೋಗ ಕುಮಾರ ಹಾಗೂ ನಿರ್ಮಲ ಯೋಗ ಕುಮಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.

14 ವರ್ಷದೊಳಗಿನ ಹಾಗೂ 17 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿ ಆಳ್ವಾಸ್ ಪಾಲಾಗಿದೆ.

ಸಾಧನೆ ಮರೆದ ಆಳ್ವಾಸ್‍ನ ವಿದ್ಯಾರ್ಥಿಗಳು

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅನನ್ಯಾ ಪ್ರಥಮ ಹಾಗೂ ಬಾಲಕರ ವಿಭಾಗದಲ್ಲಿ ಮಲ್ಲಿಕಾರ್ಜುನ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪವನ್(ಪ್ರಥಮ) ಅಮೋಘ್ ಸ್ವಾಮಿ(ದ್ವಿತೀಯ), 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಿರ್ಮಲಾ(ಪ್ರಥಮ), ಪ್ರಿಯಾಂಕಾ( ದ್ವಿತೀಯ), ಸವಿತಾ(ನಾಲ್ಕನೇ ಸ್ಥಾನ), ಪೂಜಾ(5ನೇ ಸ್ಥಾನ), ರಿದಮಿಕ್ ಯೋಗದಲ್ಲಿ ಭಾರತಿ ಪ್ರಥಮ ಹಾಗೂ ಅರ್ಟಿಸ್ಟಿಕ್ ಯೋಗದಲ್ಲಿ ರೂಪಾ ಪ್ರಥಮ ಸ್ಥಾನಿಯಾಗಿದ್ದಾರೆ.

ಪ್ರಶಸ್ತಿ ವಿಜೇತ ಯೋಗಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.