ವಾರದೊಳಗೆ ಮೈತ್ರಿ ಸರ್ಕಾರ ಪತನ: ನಳಿನ್ ಕುಮಾರ್ ಕಟೀಲ್

ವಾರದೊಳಗೆ ಮೈತ್ರಿ ಸರ್ಕಾರ ಪತನ: ನಳಿನ್ ಕುಮಾರ್ ಕಟೀಲ್

MV   ¦    May 25, 2019 09:29:14 AM (IST)
ವಾರದೊಳಗೆ ಮೈತ್ರಿ ಸರ್ಕಾರ ಪತನ: ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ವಾರದೊಳಗೆ ಕರ್ನಾಟಕದ ಮೈತ್ರಿ ಸರಕಾರವು ಪತನಗೊಂಡು ಬಿಎಸ್ ವೈ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಪಕ್ಷದ ಪ್ರಮುಖ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ಈ ಹಿಂದೆ ಬಿಎಸ್ ವೈ ಅವರು ಮುಖ್ಯಮಂತ್ರಿಯಾಗಿದ್ದಾಗ ಗರಿಷ್ಠ ಮೊತ್ತದ ಅನುದಾನ ಜಿಲ್ಲೆಗೆ ಹರಿದು ಬಂದಿದೆ.ಕೇಂದ್ರ ಮತ್ತು ರಾಜ್ಯದಲ್ಲು ಒಂದೇ ಪಕ್ಷದ ಆಡಳಿತ ಬಂದಾಗ ಮತ್ತಷ್ಟು ಅನುದಾನವನ್ನು ತರಲು ಸಹಕಾರಿಯಾಗುವುದು ಎಂದರು.

ದೇಶದಲ್ಲಿ ವಂಶ ರಾಜಕಾರಣದ ಭೋಗ ಜೀವನಕ್ಕೆ ಅವಕಾಶವಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಭೀತಾಗಿದ್ದು,ಪ್ರಧಾನಿ ನರೇಂದ್ರ ಮೋದಿಯವರ ತ್ಯಾಗ ಮತ್ತು ಸಂತ ಜೀವನಕ್ಕೆ ಜನತೆ ಮನ್ನಣೆ ನೀಡಿದ್ದಾರೆ ಎಂದ ನಳಿನ್ ತನ್ಮೂಲಕ ಬೋಗ ಜೀವನ ಮತ್ತು ವಂಶರಾಜಕಾರಣ ಮಾಡುತ್ತಿದ್ದ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ ಎಂದರು.

ಕಳೆದ 28 ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದು,ಈಗ ಏಳು ಬಿಜೆಪಿ ಶಾಸಕರನ್ನು ಹೊಂದಿದೆ.ಆಮೂಲಕ ಪ್ರಧಾನಿ ಮೋದಿಯವರ ಕಲ್ಪನೆಯಂತೆಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ ಹಾಗೆಯೇ ಕರ್ನಾಟಕದಲ್ಲು 25 ಸಂಸದರನ್ನು ಬಿಜೆಪಿ ಗೆಲುವು ಸಾಧಿಸಿ ಕರ್ನಾಟಕದಲ್ಲು ಕಾಂಗ್ರೆಸ್ ಮುಕ್ತವಾಗಿದೆ.ದೇಶದಲ್ಲಿ ವಿಪಕ್ಷ ಸ್ಥಾನಕ್ಕು ಅನರ್ಹವಾಗಿದೆ ಎಂದರು.

ಶಾಸಕ ಯು.ರಾಜೇಶ್ ನಾಯ್ಕ್ ಅವರು ಸಂಸದರನ್ನು ಸನ್ಮಾನಿಸಿ ಮಾತನಾಡಿ,ಕಳೆದ ವಿಧಾನಸಭೆ ಚುನಾವಣೆಗಿಂತ ಈ ಚುನಾವಣೆಯಲ್ಲಿ ಬಂಟ್ವಾಳದಿಂದಲು 32 ಸಾವಿರಕ್ಕು ಅಧಿಕ ಮತಗಳಷ್ಟು ಮುನ್ನಡೆ ಸಾಧಿಸಿ ಬಂಟ್ವಾಳ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಭೀತುಪಡಿಸಿದೆ ಎಂದರು.

ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ,ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ,ಪಕ್ಷದ ಮುಖಂಡರಾದ ದಿನೇಶ್ ಅಮ್ಟೂರು,ದಿನೇಶ್ ಭಂಡಾರಿ,ಪುರುಷೊತ್ತಮ ಶೆಟ್ಟಿವಾಮದಪದವು, ತಾಪಂಸದಸ್ಯ ಪ್ರಭಾಕರ ಪ್ರಭು,ಗಣೇಶ್ ಸುವರ್ಣಮಾಜಿಸದಸ್ಯರಾದ ಸೋಮಪ್ಪಕೋಟ್ಯಾನ್,ವಸಂತಕುಮಾರ್ ಅಣ್ಣಳಿಕೆ,ಪ್ರಮುಖರಾದ ವಜ್ರನಾಥ ಕಲ್ಲಡ್ಕ,ಬೊಳ್ಳುಕಲ್ಲು ನಾರಾಯಣಪೂಜಾರಿ,ರಂಜಿತ್ ಮೈರ,ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ಸಂತೋಷ್ ಕುಮಾರ್ ಬೆಟ್ಟು,ಹರೀಶ್ ಆಚಾರ್ಯ ಹಾಗೂ ಪುರಸಭಾಸದಸ್ಯರು ಉಪಸ್ಥರಿದ್ದರು.ಇದೇ ವೇಳೆ ಕಾರ್ಯಕರ್ತರು ಸಂಸದರನ್ನು ಅಭಿನಂದಿಸಿದರು.ದಿವಂಗತ ಶರತ್ ಮಡಿವಾಳ ಅವರ ತಂದೆ ತನಿಯಪ್ಪಮಡಿವಾಳ ಅವರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಆರ್ಶೀವಾದ ಪಡೆದುಕೊಂಡರು. ರಾಮದಾಸ್ ಬಂಟ್ವಾಳ ಸ್ವಾಗತಿಸಿ,ವಂದಿಸಿದರು.