ಜನರಿಗೆ ಕೋಮುಸಂಘರ್ಷ ಬೇಕಾಗಿಲ್ಲ: ರಾಮಲಿಂಗಾ ರೆಡ್ಡಿ

ಜನರಿಗೆ ಕೋಮುಸಂಘರ್ಷ ಬೇಕಾಗಿಲ್ಲ: ರಾಮಲಿಂಗಾ ರೆಡ್ಡಿ

HSA   ¦    Jan 12, 2018 02:01:32 PM (IST)
ಜನರಿಗೆ ಕೋಮುಸಂಘರ್ಷ ಬೇಕಾಗಿಲ್ಲ: ರಾಮಲಿಂಗಾ ರೆಡ್ಡಿ

ಮಂಗಳೂರು: ಸಂಘಟನೆಗಳು ಸುಮ್ಮನಿದ್ದರೆ ಯಾವುದೇ ರೀತಿಯ ಕೋಮುಗಲಭೆಗಳು ನಡೆಯುವುದಿಲ್ಲವೆಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲದೆ ಇರುವ ಕೋಮುಗಲಭೆ ದಕ್ಷಿಣ ಕನ್ನಡದಲ್ಲಿ ಮಾತ್ರ ಇದೆ. ಕೋಮುವಾಗಿ ಸಂಘಟನೆಗಳು ಇಂತಹ ಘಟನೆಗಳಿಗೆ ಕಾರಣ. ಜನರಿಗೆ ಮಾತ್ರ ಇದು ಯಾವುದು ಬೇಕಿಲ್ಲ. ಸಂಘಟನೆಗಳು ಸುಮ್ಮನಿದ್ದರೆ ಇದ್ಯಾವುದು ನಡೆಯುವುದಿಲ್ಲ ಎಂದು ಹೇಳಿದರು.

ಪಿಎಫ್ಐ ಮತ್ತು ಎಸ್ ಡಿಪಿಐ ನಿಷೇಧ ಮಾಡುವುದಾದರೆ ಬಲಪಂಥೀಯ ಸಂಘಟನೆಗಳನ್ನು ಕೂಡ ನಿಷೇಧಿಸಬೇಕು. ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು 9 ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಇವೆಲ್ಲದರ ಬಗ್ಗೆ ಮುಖ್ಯಮಂತ್ರಿಗಳ ರಾಜ್ಯ ಪ್ರವಾಸ ಮುಕ್ತಾಯಗೊಂಡ ಬಳಿಕ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಬಿಜೆಪಿಯವರು ಭಾಗವಹಿಸಿಲ್ಲ. ಜೈಲೂ ಸೇರಿಲ್ಲ. ಇದಕ್ಕಾಗಿ ಜೈಲ್ ಭರೋ ಚಳವಳಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.