ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿ

ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿ

MV   ¦    Nov 14, 2017 06:48:43 PM (IST)
ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿ

ಬಂಟ್ವಾಳ: ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕರು ಮಹಿಳೆಯೋರ್ವರ ಬಂಗಾರದ ಕರಿಮಣಿ ಸರವನ್ನು ಕತ್ತಿನಿಂದ ಕಿತ್ತುಕೊಂಡು ಹೋದ ಘಟನೆ ಮಂಗಳವಾರ ಮಧ್ಯಾಹ್ನ ವೇಳೆ ನಡೆದಿದೆ.

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ ನೇತ್ರಾವತಿ ಎಂಬವರು ಸಿದ್ದಕಟ್ಟೆಗೆ ಹೋಗಿ ರಾಯಿಯಲ್ಲಿ ಬಸ್ ನಿಂದಿಳಿದು ಮನೆಗೆ ವಾಪಾಸು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಿದ್ದಕಟ್ಟೆ ಕಡೆಯಿಂದ ಇಬ್ಬರು ಬಿಳಿ ಬಣ್ಣದ ಜುಪಿಟರ್ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ನೇತ್ರಾವತಿಯವರ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನದ ಕರಿಮಣಿಸರವನ್ನು ಎಳೆದುಕೊಂಡು ವಾಪಾಸು ಸಿದ್ದಕಟ್ಟೆ ಕಡೆಗೆ ಪರಾರಿಯಾಗಿದ್ದಾರೆ.

ಈ ಎಲ್ಲಾ ಘಟನೆಗಳ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಇದು ಪೋಲಿಸರ ಕೈಸೇರಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎನ್.ಎಸ್. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.