ವೀರಮರಣವನ್ನಪ್ಪಿದ ಯೋಧನಿಗೆ ಸರಕಾರಿ ಗೌರವ ಸಲ್ಲಿಸಿದ ಜಿಲ್ಲಾಡಳಿತ

ವೀರಮರಣವನ್ನಪ್ಪಿದ ಯೋಧನಿಗೆ ಸರಕಾರಿ ಗೌರವ ಸಲ್ಲಿಸಿದ ಜಿಲ್ಲಾಡಳಿತ

SB   ¦    Jul 11, 2018 02:00:53 PM (IST)
ವೀರಮರಣವನ್ನಪ್ಪಿದ ಯೋಧನಿಗೆ ಸರಕಾರಿ ಗೌರವ ಸಲ್ಲಿಸಿದ ಜಿಲ್ಲಾಡಳಿತ

ಕಾರವಾರ: ಛತ್ತೀಸಘಡದಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವೀರ ಮರಣವನ್ನಪ್ಪಿದ ಉತ್ತರ ಕನ್ನಡ ಜಿಲ್ಲೆಯಯ ಕಾರವಾರದ ಕೋಡಿಬಾಗ ಮೂಲದ ಯೋಧ ವಿಜಯಾನಂದ ಸುರೇಶ್ ನಾಯ್ಕ (29) ಅವರ ಪಾರ್ಥಿವ ಶರೀರದ ದರ್ಶನವನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪಡೆದರು.

ಛತ್ತೀಸಘಡದ ಕಂಕೇರ್ ಜಿಲ್ಲೆಯ ಚೋಟೆಬೆಟಿಯಾ ಕಾಡಿನಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ೨ ವಿವಿಧ ತಂಡಗಳು ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಮಂಗಳವಾರ ತಡ ರಾತ್ರಿ ಗೋವಾ ಮೂಲಕ ವಿಜಯಾನಂದ ಅವರ ಪಾರ್ಥೀವ ಶರೀರವನ್ನು ಗೋವಾ ಮಾರ್ಗವಾಗಿ ಬೆಳಿಗ್ಗೆ ಕಾರವಾರಕ್ಕೆ ತರಲಾಯಿತು. ಜಿಲ್ಲಾಧಿಕಾರಿ ಕಚೇರಿಯಿಂದ ತೆರೆದ ವಾಹನದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿ, ಪೊಲೀಸ್ ಕವಾಯತು ಮೈದಾನದಲ್ಲಿ ಪಾರ್ಥಿವ ಶರೀರದ ವೀಕ್ಷಣೆಗೆ ಇಡಲಾಗಿತ್ತು. ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೌರವ ವಂದನೆ ಸಲ್ಲಿಸಿ, ಸರಕಾರಿ ಗೌರವ ಸಲ್ಲಿಸಿದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಂದನೆ ಅರ್ಪಿಸಿದರು. ಈ ವೇಳೆ ಯೋಧನ ಕುಟುಂಬಸ್ಥರು, ಆತ್ಮೀಯರ ರೋಧನ ಮುಗಿಲು ಮುಟ್ಟಿತ್ತು.

 

More Images