ಮುಂಡಾಜೆ ಅಕ್ರಮ ಗೋ ಸಾಗಾಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ

ಮುಂಡಾಜೆ ಅಕ್ರಮ ಗೋ ಸಾಗಾಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ

LG   ¦    Jul 12, 2019 09:54:20 AM (IST)
 ಮುಂಡಾಜೆ ಅಕ್ರಮ ಗೋ ಸಾಗಾಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮುಂಡಾಜೆ ಸಮೀಪ ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿರುವಾಗ ಕಾರು ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರಮುಖ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ.

ಮಂಗಳೂರು ತೆಂಕ ಮಿಜಾರು ಗ್ರಾಮದ ತೋಡಾರು ನಿವಾಸಿ ಬಶೀರ್ ಯಾನೆ ಅರಗ ಬಶೀರ್(42 ) ಬಂಧಿಸಿ ನ್ಯಾಯಾಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದರೆಯ ತೋಡಾರು ಹಿದಾಯತ್ ನಗರ ನಿವಾಸಿ ಕಾರು ಮಾಲಕ ಅನ್ಸಾರ್(27) ಹಾಗೂ ಜುಬೇರ್(26) ಎಂಬುವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಪ್ರಕರಣದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಶೀರ್ ವಿರುದ್ಧ ಅಕ್ರಮ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲೂ ಪ್ರಕರಣದ ದಾಖಲಾಗಿದ್ದು, ಕಳಸ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.