ಕೊಂಬೆಟ್ಟು ಪ್ರೌಢಶಾಲೆಯ ಶಿಕ್ಷಕರ ನಿಯಮ ಬಾಹಿರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕೊಂಬೆಟ್ಟು ಪ್ರೌಢಶಾಲೆಯ ಶಿಕ್ಷಕರ ನಿಯಮ ಬಾಹಿರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

LB   ¦    Jul 11, 2019 02:22:17 PM (IST)
ಕೊಂಬೆಟ್ಟು ಪ್ರೌಢಶಾಲೆಯ ಶಿಕ್ಷಕರ ನಿಯಮ ಬಾಹಿರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಪುತ್ತೂರು: ಶಿಕ್ಷಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ಪ್ರತಿಭಟನೆ ನಡೆಸಿದ ಘಟನೆಯು ನಡೆದಿದೆ.

ಸರಕಾರಿ ಶಾಲೆಯೆಂಬ ಪೋಷಕರಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕೆಂದು ಸರಕಾರದ ಆದೇಶದಂತೆ ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಸೇರಿಕೊಂಡು ಶಿಕ್ಷಣ ವ್ಯವಸ್ಥೆಯೇ ಮೆಚ್ಚುವಂತಹ ವಿಶೇಷ ದಾಖಲಾತಿ ಅಭಿಯಾನ 'ಕಲನ' ಮೂಲಕ ಅತೀ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ ಬಳಿಕ ಇದೀಗ ನಿಯಮ ಬಾಹಿರವಾಗಿ ಶಾಲೆಯಲ್ಲಿ ಹೆಚ್ಚುವರಿ 6 ಶಿಕ್ಷಕರು ಎಂದು ಪರಿಗಣಿಸಿ ಅವರಿಗೆ ವರ್ಗಾವಣೆ ಆದೇಶ ನೀಡಿರುವುದು ಸರಿಯಲ್ಲ. ಶಿಕ್ಷಕರ ವರ್ಗಾವಣೆ ಆದೇಶದವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜು. 11ರಂದು ಶಾಲೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯಲ್ಲಿನ ಶಿವಸದನದಲ್ಲಿ ಸಭೆ ನಡೆಸಿ ಬಳಿಕ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ್ದಾರೆ.

 

More Images