ಬೆಳ್ತಂಗಡಿ: ಪ್ರತಿಭಟನೆ ಬಳಿಕ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ: ಪ್ರತಿಭಟನೆ ಬಳಿಕ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿದ ಪೊಲೀಸರು

DA   ¦    Feb 13, 2018 07:44:21 PM (IST)
ಬೆಳ್ತಂಗಡಿ:  ಪ್ರತಿಭಟನೆ ಬಳಿಕ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ: ಅತ್ಯಾಚಾರವೆಸಗಿದ ನೈಜ ಆರೋಪಿಯನ್ನು ಕೂಡಲೇ ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ವತಿಯಿಂದ ಧರ್ಮಸ್ಥಳ ಠಾಣೆಯೆದುರು ಫೆ. 5 ನಡೆಸಿದ ಪ್ರತಿಭಟನೆಗೆ ಸೂಕ್ತ ಫಲ ದೊರಕಿದ್ದು, ಆರೋಪಿಯನ್ನು ಸೋಮವಾರ ಪೋಲಿಸರು ಬಂಧಿಸಿದ್ದಾರೆ. ಜ. 31 ರಂದು ಪ್ರೌಢಶಾಲಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಪಂಗಡದ ಬಾಲಕಿಗೆ ರಿಕ್ಷಾದಲ್ಲಿ ಹೋಗುತ್ತಿದ್ದ ವ್ಯಕ್ತಿ ಕಿರುಕುಳ ನೀಡಿದ್ದ ರೇಜಿಸ್ ಎಂಬಾತನನ್ನು ಪೋಲಿಸರು ಕೇರಳದಲ್ಲಿ ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ರಿಕ್ಷಾ ಚಾಲಕ ಜಯರಾಜ್ ನ್ನು ಬಂಧಿಸಲಾಗಿತ್ತು.

ರೇಜಿಸ್ ಹಾಗೂ ಸ್ನೇಹಿತ ಸೇರಿಕೊಂಡು ವಾರದ ಹಿಂದೆ ಶಾಲೆ ಬಿಟ್ಟು ಹೋಗುತ್ತಿದ್ದ ಬಾಲಕಿಯನ್ನು ಬಲವಂತವಾಗಿ ರಿಕ್ಷಾಕ್ಕೆ ಹತ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು, ಬಾಲಕಿ ಬೊಬ್ಬೆಹೊಡೆದು ಅವರಿಂದ ತಪ್ಪಿಸಿಕೊಂಡಿದ್ದಳು. ಘಟನೆಯ ಬಳಿಕ ರೆಜೀಸ್ ನಾಪತ್ತೆಯಾಗಿದ್ದ ಇದೀಗ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಈತನ ವಿರುದ್ದ ಅತ್ಯಾಚಾರಕ್ಕೆ ಯತ್ನ ಹಾಗೂ ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದಕ್ಕೂ ಮೊದಲು ನಿಜವಾದ ಆರೋಪಿಯನ್ನು ಬಂಧಿಸಲು ಪೋಲಿಸರು ಹಿಂದೆಮುಂದೆ ನೋಡುತ್ತಿದ್ದರು. ಪೋಲಿಸರ ವಿಳಂಬ ಧೋರಣೆಯನ್ನು ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು. ಕಲ್ಮಂಜ ಪರಿಸರದ ನಾಗರಿಕರು ಸೇರಿ ಧರ್ಮಸ್ಥಳ ಠಾಣೆಯೆದುರು ತೀವ್ರವಾದ ಪ್ರತಿಭಟನೆಯನ್ನು ನಡೆಸಿ ಒತ್ತಡ ಹೇರಿದ್ದರು. ಬಂಧಿಸದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳಲಾಗುವುದೆಂದು ಸಂಘಟನೆಯವರು ಎಚ್ಚರಿಸಿದ್ದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.