ಅಕ್ರಮ ಗೋಸಾಗಾಟ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಅಕ್ರಮ ಗೋಸಾಗಾಟ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

DA   ¦    Aug 10, 2017 05:56:27 PM (IST)
ಅಕ್ರಮ ಗೋಸಾಗಾಟ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಬೆಳ್ತಂಗಡಿ : ಟೆಂಪೋ ವಾಹನದಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬುಧವಾರ ಸವಣಾಲು ಬಳಿ ನಡೆದಿದೆ. ಪಡಂಗಡಿ ಗ್ರಾಮದ ಪೀಟರ್ ಫ್ರಾನ್ಸಿಸ್ ಪಿಂಟೋ ಹಾಗೂ ಸ್ಥಳೀಯ ನಿವಾಸಿ ಕೃಷ್ಣಪ್ಪ ಗೌಡ ಎಂಬುವರನ್ನು ಹಿಂದೂ ಸಂಘಟನೆಯವರು ಪೋಲಿಸರಿಗೊಪ್ಪಿಸಿದ್ದಾರೆ. ಸವಣಾಲು ಗ್ರಾಮದಿಂದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3 ದನ ಮತ್ತು 1 ಕರುವನ್ನು ಟೆಂಪೋದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ದಾರಿ ಮಧ್ಯೆ ಹಿಂದೂ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಡೆದು ನಿಲ್ಲಿಸಿ ದನ ಕರುಗಳನ್ನು ರಕ್ಷಿಸಿ ಪೊಲೀಸರಿಗೊಪ್ಪಿಸಿದ್ದಾರೆ