ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಹೊಡೆದಾಟ: 8 ಮಂದಿಗೆ ಗಾಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಹೊಡೆದಾಟ: 8 ಮಂದಿಗೆ ಗಾಯ

YK   ¦    Nov 07, 2018 05:08:42 PM (IST)
ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಹೊಡೆದಾಟ: 8 ಮಂದಿಗೆ ಗಾಯ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಏರ್ ಪೋರ್ಟ್ ನ ಟ್ಯಾಕ್ಸಿ ಯೂನಿಯನ್ ಹಾಗೂ ಆನ್ ಲೈನ್ ಟ್ಯಾಕ್ಸಿ ಯೂನಿಯನ್ ಸದಸ್ಯರ ನಡುವೆ ಹೊಡೆದಾಟ ನಡೆದು 8 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗುವ ವಿಚಾರದಲ್ಲಿ ಎರಡು ಯೂನಿಯನ್ ಸದಸ್ಯರ ನಡುವೆ ಹೊಡೆದಾಟ ನಡೆದಿದೆ.

ಘಟನೆ ಹಿನ್ನೆಲೆ:  ಬುಧವಾರ ಬೆಳಿಗ್ಗೆ ಆನ್ ಲೈನ್ ಟ್ಯಾಕ್ಸಿ ಡ್ರೈವರ್ ಒಬ್ಬ ಪ್ರಯಾಣಿಕನನ್ನು ಕರೆದುಕೊಂಡು ವಿಮಾನ ನಿಲ್ದಾಣದ ಬಳಿ ಬಂದಾಗ ಏರ್ ಪೋರ್ಟ್ ಟ್ಯಾಕ್ಸಿ ಯೂನಿಯನ್ ನ ಸದಸ್ಯರು ಆತನನ್ನು ತಡೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆನ್ ಲೈನ್ ಟ್ಯಾಕ್ಸಿ ಡ್ರೈವರ್, ವಿಮಾನದಲ್ಲಿ ಬರುವ ಪ್ರಯಾಣಿಕರು ನಾವು ಕರೆದುಕೊಂಡು ಹೋಗಬಹುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ ಎಂದು ಹೇಳಿದ್ದಾನೆ. ಮಾತು ಹೊಡೆದಾಟಕ್ಕೆ ತಿರುಗಿ ಈ ವೇಳೆ ಎರಡು ಯೂನಿಯನ್ ನ ಜಾನ್ ಅಬ್ರಾಂ, ಆಲ್ತಾಫ್, ಬಿ.ಕೆ. ಇಮ್ತಿಯಾಜ್, ವಿಲ್ಸನ್ ಸೇರಿದಂತೆ 8 ಮಂದಿ ಗಾಗಯಗೊಂಡಿದ್ದಾರೆ.

More Images