12ದಿನದ ಹಸುಗೂಸುನ್ನು ಬೆಂಕಿ ಹಚ್ಚಿ ಕೊಂದ ಹೆತ್ತ ತಾಯಿ

12ದಿನದ ಹಸುಗೂಸುನ್ನು ಬೆಂಕಿ ಹಚ್ಚಿ ಕೊಂದ ಹೆತ್ತ ತಾಯಿ

SB   ¦    Mar 13, 2018 09:42:40 AM (IST)
12ದಿನದ ಹಸುಗೂಸುನ್ನು ಬೆಂಕಿ ಹಚ್ಚಿ ಕೊಂದ ಹೆತ್ತ ತಾಯಿ

ಕಾರವಾರ: ಹನ್ನೆರಡು ದಿನದ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಸುಟ್ಟು ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯನ್ನು ಯಶೋಧಾ ಗೋಪಾಲ ಮೊಗೇರ್ ಎಂದು ಪತ್ತೆ ಮಾಡಲಾಗಿದೆ. ಹೆಣ್ಣು ಮಗುವನ್ನು ಸುಟ್ಟು ಕೊಂಡು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಭಟ್ಕಳ ಪೊಲೀಸರು ಬಂಧಿಸಿ ಕಾರವಾರದ ಜೈಲಿಗೆ ಕಳುಹಿಸಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಭಟ್ಕಳ ತಾಲೂಕಿನ ಬೆಳ್ನಿಯ ಗೋಪಾಲ್ ಮೊಗೇರ್ ಎನ್ನುವವನು ಯಶೋಧಗೆ ಮದುವೆಯಾಗಿದ್ದ. ಈಕೆ ಹೆರಿಗೆಗಾಗಿ ತವರು ಮನೆಯಾದ ವೆಂಕಟಾಪುರಕ್ಕೆ ಬಂದಿದ್ದಳು.

ಹೆರಿಗೆಯಾಗಿ 12 ದಿನಗಳು ಕಳೆದರೂ ತನ್ನ ಪತಿ ಹೆಣ್ಣು ಮಗಳನ್ನು ನೋಡಲು ಬಂದಿಲ್ಲ ಎಂದು ಮಾನಸಿಕವಾಗಿ ನೊಂದು ಮಾ.9ರಂದು ಶಿಶುವಿಗೆ ಬೆಂಕಿ ಹಚ್ಚಿದ್ದಾರೆ. ನೋಡಿದವರು ಮಗುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.