ದೃಷ್ಟಿ ದೋಷವಿದ್ದರೂ ಕಾರ್ನಿಯಾ ಒಳ್ಳೆಯದಿದ್ದರೆ ನೇತ್ರದಾನ ಸಾಧ್ಯ

ದೃಷ್ಟಿ ದೋಷವಿದ್ದರೂ ಕಾರ್ನಿಯಾ ಒಳ್ಳೆಯದಿದ್ದರೆ ನೇತ್ರದಾನ ಸಾಧ್ಯ

DA   ¦    Oct 12, 2017 01:22:42 PM (IST)
ದೃಷ್ಟಿ ದೋಷವಿದ್ದರೂ ಕಾರ್ನಿಯಾ ಒಳ್ಳೆಯದಿದ್ದರೆ ನೇತ್ರದಾನ ಸಾಧ್ಯ

ಬೆಳ್ತಂಗಡಿ: ದೃಷ್ಟಿ ದೋಷವಿದ್ದರೂ ಕಾರ್ನಿಯಾ ಉತ್ತಮ ಸ್ಥಿತಿಯಲ್ಲಿದ್ದರೆ ಯಾರು ಬೇಕಾದರೂ ನೇತ್ರದಾನ ಮಾಡಬಹುದು ಎಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞೆ ಡಾ. ವಿದ್ಯಾರಾಣಿ ಹೇಳಿದರು.

ಗುರುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಡಿ.ಕೆ.ಆರ್.ಡಿ.ಸಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಬ್ಲೈಂಡ್ ವಾಕ್ 2017 ಕಾರ್ಯಕ್ರಮದಲ್ಲಿ ನೇತ್ರದಾನ ಪ್ರತಿಜ್ಞೆ, ಅರಿವು, ಅನುಭವ ಹಂಚಿಕೆ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಮಕ್ಕಳು ಆಟ ಆಡುವಾಗಲೇ ದೃಷ್ಟಿ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಆಟ ಆಡುವಾಗ ಜಾಗ್ರತೆ ವಹಿಸಬೇಕಾದುದು ಅವಶ್ಯ. ಡಯಾಬಿಟಿಸ್, ರಕ್ತದ ಒತ್ತಡ ಇದ್ದರೂ ಕಣ್ಣಿನ ಅಕ್ಷಿ ಪಟಲಕ್ಕೆ ತೊಂದರೆಯಾಗುತ್ತದೆಯೇ ಹೊರತು ಕಾರ್ನಿಯಾಕ್ಕೆ ಯಾವುದೇ ಹಾನಿ ಆಗುವುದಿಲ್ಲ. ನೇತ್ರದಾನ ಮಾಡಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಮರಣ ಹೊಂದಿದ ವ್ಯಕ್ತಿಯ ಮುಖವು ನೇತ್ರದಾನದ ಕಾರಣದಿಂದ ವಿಕಾರಗೊಳ್ಳುವುದಿಲ್ಲ. ಅಪೌಷ್ಠಿಕತೆ ಹಾಗು ಏಡ್ಸ್ ನಿಂದ ಬಳಲುತ್ತಿರುವವರ ನೇತ್ರದಾನ ಸಾಧ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಐ ಬ್ಯಾಂಕ್ ಗಳಲ್ಲಿ ದೃಷ್ಟಿದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.