ಮೂಡುಬಿದಿರೆಯಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರ

ಮೂಡುಬಿದಿರೆಯಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರ

DSK   ¦    Jun 11, 2019 08:00:52 PM (IST)
ಮೂಡುಬಿದಿರೆಯಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಂಗಳೂರು, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಛೇರಿ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಂಗಳೂರು, ಜವನೆರ್ ಬೆದ್ರ, ಸಮುದಾಯ ಆರೋಗ್ಯ ಕೇಂದ್ರ, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರವು ಮಂಗಳವಾರ ಗಾಂಧಿನಗರ ಕಡ್ದಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಆರಂಭಗೊಂಡಿತು.

ಕ್ಷೇತ್ರದ ಶಾಸಕ ಎ.ಉಮಾನಾಥ ಕೋಟ್ಯಾನ್ ಜನಜಾಗೃತಿ ಶಿಬಿರಕ್ಕೆ ದೀಪ ಬೆಳಗಿಸಿ ನಂತರ ಪುರಸಭಾ ಸದಸ್ಯೆ ದಿವ್ಯ ಜಗದೀಶ್ ಅವರು ಮಲೇರಿಯಾ ವಿರೋಧ ಪ್ರಚಾರಾಂದೋಲನಕ್ಕೆ ಹಸಿರು ಬಾವುಟ ಬೀಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಮಳೆಗಾಲ ಆರಂಭದ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳು ಬರುತ್ತಿರುತ್ತವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಕುಡಿದು ಬಿಸಾಡಿದ ಸೀಯಾಳದ ಚಿಪ್ಪುಗಳು, ಟಯರ್‍ ಗಳು, ನೀರು ತುಂಬಿರುವ ಟ್ಯಾಂಕರ್‍ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕೆಂದರು.