ಪ್ರವಾಹ ಪೀಡಿತರಿಗಾಗಿ ಆರ್ ಎಸ್ಎಸ್ ವತಿಯಿಂದ ನಿಧಿ ಸಂಗ್ರಹ

ಪ್ರವಾಹ ಪೀಡಿತರಿಗಾಗಿ ಆರ್ ಎಸ್ಎಸ್ ವತಿಯಿಂದ ನಿಧಿ ಸಂಗ್ರಹ

GK   ¦    Aug 13, 2019 03:44:52 PM (IST)
ಪ್ರವಾಹ ಪೀಡಿತರಿಗಾಗಿ ಆರ್ ಎಸ್ಎಸ್ ವತಿಯಿಂದ ನಿಧಿ ಸಂಗ್ರಹ

ಸುಳ್ಯ. ಪ್ರವಾಹ ಪೀಡಿತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾಭಾರತಿ ವತಿಯಿಂದ ಪರಿಹಾರ ನಿಧಿ ಸಂಗ್ರಹ ಸುಳ್ಯ ನಗರದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ ಚಾಲನೆ ನೀಡಿದರು.

ಶಾಸಕ ಎಸ್.ಅಂಗಾರ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್.ರೈ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಎ.ವಿ.ತೀರ್ಥರಾಮ, ಭಾಗೀರಥಿ ಮುರುಳ್ಯ, ಸುಬೋಧ್ ಶೆಟ್ಟಿ ಮೇನಾಲ, ಸುರೇಶ್ ಕಣೆಮರಡ್ಕ, ಸುದರ್ಶನ ಪಾತಿಕಲ್ಲು, ಅಬ್ದುಲ್ ಕುಂಞಿ ನೇಲ್ಯಡ್ಕ, ಉದಯಕುಮಾರ್ ಮಂಡೆಕೋಲು, ಚಂದ್ರಶೇಖರ ಪನ್ನೆ, ಗುಣವತಿ ಕೊಲ್ಲಂತ್ತಡ್ಕ, ಲೋಕೇಶ್ ಕೆರೆಮೂಲೆ, ಸತೀಶ್ ಕಾಟೂರು, ಸುನಿಲ್ ಕೇರ್ಪಳ, ತಾ.ಪಂ.ಸದಸ್ಯೆ ಜಾಹ್ನವಿ ಕಾಂಚೋಡು, ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ ಸುಧಾಕರ ಕುರುಂಜಿಭಾಗ್, ಶಿಲ್ಪಾ ಸುದೇವ್, ಸರೋಜಿನಿ ಪೆಲ್ತಡ್ಕ, ಕಿಶೋರಿ ಶೇಟ್, ಶಶಿಕಲಾ ನೀರಬಿದಿರೆ, ಪ್ರವಿತಾ ಪ್ರಶಾಂತ್, ವಾಣಿಶ್ರೀ, ಬುದ್ದ ನಾಯ್ಕ್, ಬಾಲಕೃಷ್ಣ ರೈ, ಸುಶೀಲಾ ಜಿನ್ನಪ್ಪ ಮೊದಲಾದವರು ಭಾಗವಹಿಸಿದ್ದರು. ನಾಲ್ಕು ತಂಡಗಳಾಗಿ ನಿಧಿ ಸಂಗ್ರಹ ಕಾರ್ಯ ನಡೆಸಿದರು.