ತಾಕತ್ತಿದ್ದರೆ ಚುನಾವಣೆಗೆ ನಿಂತು ನೋಡಿ: ಕರಿಂಜೆ ಸ್ವಾಮೀಜಿಗೆ ಸವಾಲೆಸೆದ ಶಾಸಕ ಜೈನ್

ತಾಕತ್ತಿದ್ದರೆ ಚುನಾವಣೆಗೆ ನಿಂತು ನೋಡಿ: ಕರಿಂಜೆ ಸ್ವಾಮೀಜಿಗೆ ಸವಾಲೆಸೆದ ಶಾಸಕ ಜೈನ್

YB   ¦    Mar 13, 2018 11:29:19 AM (IST)
ತಾಕತ್ತಿದ್ದರೆ ಚುನಾವಣೆಗೆ ನಿಂತು ನೋಡಿ: ಕರಿಂಜೆ ಸ್ವಾಮೀಜಿಗೆ ಸವಾಲೆಸೆದ ಶಾಸಕ ಜೈನ್

ಮೂಡುಬಿದಿರೆ: ತನ್ನನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಕ್ಷಸ ಎಂದು ಸಭೆಯೊಂದರಲ್ಲಿ ಕರಿಂಜೆ ಶ್ರೀ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಅಭಯಚಂದ್ರ ಜೈನ್ ಶ್ರೀಗಳನ್ನು ಏಕವಚನಲ್ಲಿ ಸಂಬೋಧಿಸಿ, ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ ಎಂದು ಸವಾಲೆಸಿದಿದ್ದಾರೆ.

ಸ್ವಾಮೀಜಿ ಸರ್ಕಾರಿ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿರುವ ಅಭಯಚಂದ್ರ ಜೈನ್ ಈ ಬಗ್ಗೆ ಹೋರಾಟ ಮಾಡುವುದಾಗಿ ಸೋಮವಾರ ಸಾಯಂಕಾಲ ನಡೆದ ಕಾಂಗ್ರೆಸ್ ಸಭೆಯಲ್ಲಿ ಕರಿಂಜೆ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದಾರೆ.

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 20ಕ್ಕೆ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಲ್ಕಿಯಲ್ಲಿ ನಡೆಯಲಿರುವ ಸ್ವಾಗತ ಕಾರ್ಯಕ್ರಮದ ಬಗ್ಗೆ ಸೋಮವಾರ ಸಂಜೆ ಮೂಡುಬಿದಿರೆ ಕಾಂಗ್ರೆಸ್ ಕಚೇರಿಯಲ್ಲಿ ಜರಗಿದ ಪೂರ್ವ ಸಿದ್ಧತೆ ಸಭೆಯಲ್ಲಿ ಅಭಯಚಂದ್ರ ಜೈನ್ ಕರಿಂಜೆ ಶ್ರೀ ವಿರುದ್ಧ ಸವಾಲೆಸೆದಿದ್ದಾರೆ.

ಆಯೆ ಒಂಜಿ ಕರಿಂಜೆ ಸ್ವಾಮೀಜಿ ಭಾಷಣೊಡ್ ಪಂತೆಗೆ `ಆಯೆ ಒರಿ ರಾಕ್ಷಸ ಮುಖ್ಯಮಂತ್ರಿ ಉಲ್ಲೆ, ಒರಿ ರಾಕ್ಷಸ ಎಂಎಲ್ಎ ಉಲ್ಲೆಂದ್ ಪಂತೆಗೆ.ಎಂಕ್ ನೆರಡ್ ಆಯೆ. ಆಂಡ ನನೊರಾ ಮುಖ್ಯಮುಂತ್ರಿಗ್ ನೆರುಂಡ ಆಯೆ ಯೇತ್ ಮಲ್ಲ ಸ್ವಾಮೀಜಿ ಅವಡ್ ಆಯನ್ ಬುಡ್ಪುಜಿ. ಆಯಾಗ್ ತಾಕತ್ ಇತ್ತುಂಡಾ ಆಯೆ ವೋಟ್ಗು ಉಂತಡ್...ಆಯೆ ಸರ್ಕಾರಿ ಜಾಗನ್ ಕಬಳಿಸದೆ...ನೆತ್ತ ಬಗ್ಗೆ ಯಾನ್ ಹೋರಾಟ ಮಲ್ಪುವೆ (ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ...ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ, ಒಬ್ಬ ರಾಕ್ಷಸ ಎಂಎಲ್ಎ ಇದ್ದಾನೆ ಅಂತ. ನನಗೆ ಬೈಯಲಿ.

ಅದು ಬಿಟ್ಟು ಮುಖ್ಯಮಂತ್ರಿಗೆ ಇನ್ನೊಮ್ಮೆ ಬೈದರೆ ಅವನು ಎಷ್ಟು ದೊಡ್ಡ ಸ್ವಾಮೀಜಿ ಆದರೂ ಬಿಡುವುದಿಲ್ಲ. ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ. ಅವನು ಸರ್ಕಾರಿ ಜಾಗ ಕಬಳಿಸಿದ್ದಾನೆ. ಅವನ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಅಭಯಚಂದ್ರ ಜೈನ್ ಎಕವಚನದಲ್ಲಿ ನಿಂದಿಸಿ ಸವಾಲೆಸೆದಿದ್ದಾರೆ.

ನನಗೆ 69 ವರ್ಷ ವಯಸ್ಸಾಗಿದೆ. ಇನ್ನೊಮ್ಮೆ ಎಂಎಲ್ಎ ಆಗಬೇಕೆಂಬ ಆಸೆ ಇಲ್ಲ. ಆದರೆ ಕಾರ್ಯಕರ್ತರ ರಕ್ಷಣೆಗೋಸ್ಕರ, ಪಕ್ಷದ ಹಿತಕ್ಕೋಸ್ಕರ ಕಾಂಗ್ರೆಸ್ ಗೆಲ್ಲಬೇಕು ಮತ್ತು ಈ ಮೂಲಕ ಯುವನಾಯಕ ರಾಹುಲ್ ಗಾಂಧಿ ಕೈ ಬಲಪಡಿಸಬೇಕಾಗಿದೆ ಎಂದು ಅಭಯಚಂದ್ರ ಜೈನ್ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಕಾಂಗ್ರೆಸ್ ಮುಖಂಡರಾದ ದಿನಕರ ಶೆಟ್ಟಿ, ಸಂಜೀವ ಮೊಯಿಲಿ, ರುಕ್ಕಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.