ಮೋದಿ ಹತ್ಯೆ ಮಾಡುವುದಾಗಿ ಧಾರವಾಡ ಎಸ್ ಪಿ. ಕಚೇರಿಗೆ ಪತ್ರ

ಮೋದಿ ಹತ್ಯೆ ಮಾಡುವುದಾಗಿ ಧಾರವಾಡ ಎಸ್ ಪಿ. ಕಚೇರಿಗೆ ಪತ್ರ

YK   ¦    Feb 10, 2019 06:19:07 PM (IST)
 ಮೋದಿ ಹತ್ಯೆ ಮಾಡುವುದಾಗಿ ಧಾರವಾಡ ಎಸ್ ಪಿ. ಕಚೇರಿಗೆ ಪತ್ರ

ಹುಬ್ಬಳ್ಳಿ: ಬಾನುವಾರ ನಡೆಯಲಿರುವ ಲೋಕಸಭಾ ಚುನವಣಾ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಧಾರವಾಡ ಎಸ್. ಪಿ ಕಚೇರಿಗೆ ಬೆದರಿಕೆ ಪತ್ರವೊಂದು 10ದಿನಗಳ ಹಿಂದೆ ಪೋಸ್ಟ್ ಮಾಡಿರುವುದರ ಕುರಿತು ಪ್ರಕರಣ ದಾಖಲಾಗಿದೆ.

ಹಾವೇರಿಯಿಂದ ಧಾರವಾಡ ಎಸ್.ಪಿ.ಕಚೇರಿಗೆ ಪತ್ರವನ್ನು ಫೋಸ್ಟ್ ಮಾಡಿದ್ದು ಧಾರವಾಡ ಪನಗರ ಠಾಣೆಯಲ್ಲಿ ಫೆಭ್ರುವರಿ 9ರಂದು ಪ್ರಕರಣ ದಾಖಲಾಗಿದೆ.

ಈ ಸಂಬಂಧ ತನಿಖೆ ಆರಂಭಿಸಿದ್ದು ಪರಿಶೀಲನೆ ವೇಳೆ ಇದೊಂದು ನಕಲಿ ಬೆದರಿಕೆ ಪತ್ರ ಎಂದು ಖಚಿತ ಪಡಿಸಿದ್ದಾರೆ.