ಕ್ರಿಕೆಟ್ ಬೆಟ್ಟಿಂಗ್ : ಬೇಕರಿ ಮಾಲೀಕ ಸಹಿತ ಇಬ್ಬರ ಬಂಧನ

ಕ್ರಿಕೆಟ್ ಬೆಟ್ಟಿಂಗ್ : ಬೇಕರಿ ಮಾಲೀಕ ಸಹಿತ ಇಬ್ಬರ ಬಂಧನ

MK   ¦    Jul 12, 2019 12:14:42 PM (IST)
ಕ್ರಿಕೆಟ್ ಬೆಟ್ಟಿಂಗ್ : ಬೇಕರಿ ಮಾಲೀಕ ಸಹಿತ ಇಬ್ಬರ ಬಂಧನ
ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಮುಖ ಬುಕ್ಕಿ, ಬೇಕರಿ‌ ಅಂಗಡಿ ಮಾಲೀಕ ಸೇರಿದಂತೆ ಆತನ ಸಹಚರನನ್ನು ಸಿಸಿಬಿ  ತಂಡ ತಲಪಾಡಿ ಸಮೀಪ ನಿನ್ನೆ ಬಂಧಿಸಿದೆ.
 
ವಿಟ್ಲ ಕನ್ಯಾನ ನಿವಾಸಿ ಸಂತೋಷ್ ಶೆಟ್ಟಿ (40) ಕನ್ಯಾ ನ, ಆತನ ಕಲೆಕ್ಷನ್ ಹುಡುಗನಾಗಿರುವ ಜೀವನ್ (22) ಬಂಧಿತರು.
 
ಸಂತೋಷ್ ಅವರು ಬೆಂದೂರ್ ವೆಲ್ ಸಮೀಪ ಸ್ಕಂದ ಬೇಕರಿ ಮಾಲೀಕರಾಗಿದ್ದಾರೆ.  ಬಂಧಿತರಿಂದ ಮೊಬೈಲ್ ಆಪ್, ಕಂಪ್ಯೂಟರ್, ಕ್ರೇಟಾ ಕಾರು,  ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಂತೋಷ್ ಶೆಟ್ಟಿ ಲೊಕ್ಯಾಂಟೋ ಆ್ಯಾಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತಲಪಾಡಿಯ ಮನೆಯೊಂದರಿಂದ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.