ಅಕ್ರಮ ಗೋ ಸಾಗಾಟ ಪ್ರಕರಣ: ಇಬ್ಬರ ಬಂಧನ

ಅಕ್ರಮ ಗೋ ಸಾಗಾಟ ಪ್ರಕರಣ: ಇಬ್ಬರ ಬಂಧನ

DA   ¦    Jun 12, 2019 03:16:18 PM (IST)
ಅಕ್ರಮ ಗೋ ಸಾಗಾಟ ಪ್ರಕರಣ: ಇಬ್ಬರ ಬಂಧನ

ಬೆಳ್ತಂಗಡಿ: ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿದ್ದಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಡುಬಿದಿರೆ ತೋಡಾರ್ ಇದಾಯತ್ ನಗರ ನಿವಾಸಿ ಕಾರು ಮಾಲೀಕ ಅನ್ಸಾರ್(27) ಹಾಗೂ ಮತ್ತೋರ್ವ ಜುಬೈರ್(26) ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

ಜೂ.7ರಂದು ಮುಂಡಾಜೆ ಸಮೀಪ ಕಾರು ಕಮರಿಗೆ ಪಲ್ಟಿಯಾದ ಪರಿಣಾಮ 5 ಜಾನುವಾರುಗಳು ಮೃತಪಟ್ಟು ಮತ್ತೊಂದು ದನ ಬದುಕುಳಿದಿತ್ತು. ಬೆಂಗಳೂರು ನೋಂದಣಿಯ ಕಾರನ್ನು ಅಕ್ರಮ ಗೋ ಸಾಗಾಟಕ್ಕೆ ಬಳಸಲಾಗಿತ್ತು. ತನಿಖೆ ವೇಳೆ ನಕಲಿ ನೋಂದಣಿ ಪ್ಲೇಟ್ ಎಂಬುದು ತಿಳಿದು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.

ಈ ಸಂಬಂಧ ಕರ್ತವ್ಯ ಲೋಪದ ಮೇರೆಗೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಸಿಬಂದಿಯನ್ನು ಅಮಾನತು ಮಾಡಲಾಗಿತ್ತು.

ಆರೋಪಿಗಳ ಪತ್ತೆ ಹಚ್ಚಲು ತನಿಖಾಧಿಕಾರಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ತಂಡ ಮೂರು ದಿನಗಳಿಂದ ಮೂಡುಬಿದರೆಯಲ್ಲಿ ಠಿಕಾಣಿ ಹೂಡಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.