ಮುಂಬಯಿ ವಿವಿ ಕನ್ನಡ ಪದವಿ ಪ್ರದಾನ

ಮುಂಬಯಿ ವಿವಿ ಕನ್ನಡ ಪದವಿ ಪ್ರದಾನ

HSA   ¦    Apr 12, 2018 01:05:51 PM (IST)
ಮುಂಬಯಿ ವಿವಿ ಕನ್ನಡ ಪದವಿ ಪ್ರದಾನ

ಮುಂಬಯಿ: ಎ.7ರಂದು ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ ನ ವಿದ್ಯಾನಗರಿಯ ಕವಿವರ್ಯ ಡಾ. ಕುಸುಮಾಗ್ರಜ ಮಠಾಠಿ ಭಾಷಾ ಭವನದ ಸಭಾಂಗಣದಲ್ಲಿ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಶ್ಯಾಮಲಾ ಪ್ರಕಾಶ್ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.

ಇದೇ ಕಾರ್ಯಕ್ರಮದಲ್ಲಿ ಜ್ಯೋತಿಶ್ರೀ ಬೆಂಗಳೂರು, ಅನಿತಾ ಶೆಟ್ಟಿ, ಕುಮುದಾ ಆಳ್ವ, ಹೇಮಲತಾ ಎಸ್. ಅಮೀನ್ ಅವರಿಗೆ ಎಂಎ ಪದವಿ ಮತ್ತು ಸರೋಜಿನಿ ಭಾಸ್ಕರ್, ಎಚ್. ಪಿ. ಶೀಲಾ ಅವರಿಗೆ ಎಂ.ಫಿಲ್ ಪ್ರಶಸ್ತಿ ಪ್ರದಾನಿಸಲಾಯಿತು.

ಡಾ. ಪೂರ್ಣಿಮಾ ಎಸ್. ಶೆಟ್ಟಿ ಅವರ ಮಹಾಪ್ರಬಂಧ ಮುಂಬಯಿ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿ ಬಿಡುಗಡೆ ಮಾಡಲಾಯಿತು. ಕೃತಿಕಾರರಾದ ಡಾ. ಪೂರ್ಣಿಮಾ ಎಸ್. ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ದಂಪತಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.