ಕುಲಾಲ ಮುಖವಾಣಿ ಅಮೂಲ್ಯ ತ್ರೈಮಾಸಿಕದ 20ನೇ ವರ್ಷದ ಸಂಭ್ರಮಾಚರಣೆ

ಕುಲಾಲ ಮುಖವಾಣಿ ಅಮೂಲ್ಯ ತ್ರೈಮಾಸಿಕದ 20ನೇ ವರ್ಷದ ಸಂಭ್ರಮಾಚರಣೆ

YK   ¦    Nov 03, 2018 02:32:07 PM (IST)
ಕುಲಾಲ ಮುಖವಾಣಿ ಅಮೂಲ್ಯ ತ್ರೈಮಾಸಿಕದ 20ನೇ ವರ್ಷದ ಸಂಭ್ರಮಾಚರಣೆ

ಮುಂಬೈ: ಕುಲಾಲ ಸಂಘ ಮುಂಬೈ ಇದರ ಮುಖವಾಣಿ ಅಮೂಲ್ಯ ತ್ರೈಮಾಸಿಕದ 20ನೇ ವರ್ಷದ ಸಂಭ್ರಮಾಚರಣೆಯನ್ನು ಈಚೆಗೆ ಎನ್ ಕೆಇಎಸ್ ಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬೈ ಅಧ್ಯಕ್ಷ ಪಿ.ದೇವದಾಸ್ ಎಲ್. ಕುಲಾಲ್ ಅವರು ವಹಿಸಿಕೊಂಡಿದ್ದರು.

ವಿಶೇಷ ಸಂಚಿಕೆಯನ್ನು ಸಾಫಲ್ಯ ಮಾಸಿಕದ ಸಂಪಾದಕಿ ಡಾ.ಜಿ.ಪಿ.ಕುಸುಮಾ ಅವರು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರುಗಳಾದ ಗಿರೀಶ್ ಬಿ.ಸಾಲ್ಯಾನ್, ಆನಂದ ಬಿ.ಮೂಲ್ಯ, ದೇವದಾಸ್ ಕುಲಾಲ್, ಕರುಣಾಕರ ಸಾಲ್ಯಾನ್, ಆನಂದ ಬಿ. ಮೂಲ್ಯ, ಡಿ.ಐ.ಮೂಲ್ಯ, ಪಿ.ಶೇಖರ್ ಮೂಲ್ಯ, ರಘುನಾಥಱ ಎಸ್.ಕರ್ಕೇರ, ವಾಮನ್ ಮೂಲ್ಯ ಆದ್ಯಪಾಡಿ, ಸೂರಜ್ ಎಸ್. ಹಂಡೇಲು, ಕೃಷ್ಣ ಮೂಲ್ಯ ನಲಸೋಪರ, ವಿನಯ್ ಕುಮಾರ್ ಇ. ಕುಲಾಲ್ ಇದ್ದರು.