ಉತ್ತರ ಮುಂಬಯಿ ಲೋಕಸಭಾ ಚುನಾವಣೆ - ಗೋಪಾಲ ಶೆಟ್ಟಿ ನಾಮಪತ್ರ ಸಲ್ಲಿಕೆ

ಉತ್ತರ ಮುಂಬಯಿ ಲೋಕಸಭಾ ಚುನಾವಣೆ - ಗೋಪಾಲ ಶೆಟ್ಟಿ ನಾಮಪತ್ರ ಸಲ್ಲಿಕೆ

IA   ¦    Apr 03, 2019 09:38:34 AM (IST)
ಉತ್ತರ ಮುಂಬಯಿ ಲೋಕಸಭಾ ಚುನಾವಣೆ - ಗೋಪಾಲ ಶೆಟ್ಟಿ ನಾಮಪತ್ರ ಸಲ್ಲಿಕೆ

ಮುಂಬಯಿ : ಕಳೆದ ಬಾರಿ ಅತ್ಯಧಿಕ ಮತಗಳ ಅಂತರದಿಂದ ಜಯಬೇರಿ ಗಳಿಸಿದ ಬಿಜೆಪಿ ಪಕ್ಷದ ಸಂಸದ, ಇತ್ತೀಚೆಗೆ ಅತ್ಯುತ್ತಮ ಸಂಸದರ ಪಟ್ಟಿಗೆ ಸೇರಿಸಲ್ಪಟ್ಟ ತುಳು ಕನ್ನಡಿಗರ ಮಾತ್ರವಲ್ಲದೆ ಸ್ಥಳೀಯ ವಿವಿಧ ಜಾತಿ ಭಾಂದವರ ಪ್ರೀತಿಯ ರಾಜಕಾರಣಿ ಗೋಪಾಲ ಶೆಟ್ಟಿಯವರು ಎ. 2 ರಂದು ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಹಾರಾಷ್ಟದ ಸಚಿವ ಹಾಗೂ ಪಕ್ಷದ ಉನ್ನತ ಮಟ್ಟದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಗರ ಸೇವಕರಾಗಿ, ಮುಂಬಯಿಯ ಉಪಮೇಯರ್ ಆಗಿ, ಶಾಸಕರಾಗಿ, ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸದ ಗೋಪಾಲ ಶೆಟ್ಟಿಯವರು ತಾನು ಮಾಡಿದ ಕೆಲಸದ ಬಗ್ಗೆ ಜನಮೆಚ್ಚುಗೆ ಪಡೆದಿದ್ದು ಸೊಲನ್ನರಿಯದ ಓರ್ವ ರಾಜಕಾರಣಿಯಾಗಿರುವರು.

ಇದೇ ಎಪ್ರಿಲ್ 29 ರಂದು ನಡೆಯಲಿರುವ ಲೋಕ ಸಭಾ ಚುನಾವಣೆಗೆ ಉತ್ತರ ಮುಂಬಯಿಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಂಸದ ಗೋಪಾಲ ಶೆಟ್ಟಿಯವರು ಮತ್ತೆ ಸ್ಪರ್ಧಿಸಲಿದ್ದಾರೆ.

ಹಲವು ಸಾವಿರ ಮಂದಿ ಅಭಿಮಾನಿಗಳ, ಹಿತೈಷಿಗಳ ಹಾಗೂ ತುಳುಕನ್ನಡಿಗರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಬೋರಿವಲಿ ಪಶ್ಚಿಮದ ಗೋಪಾಲ ಶೆಟ್ಟಿಯವರ ಕಚೇರಿಯಿಂದ ಮೆರವಣಿಗೆಯು ಪ್ರಾರಂಭಗೊಂಡಿದ್ದು ಮಲಾಡ್ ಎಸ್. ವಿ. ರೋಡ್ ತನಕ ಮುಂದುವರಿಯಿತು. ಗೋಪಾಲ ಶೆಟ್ಟಿ ತುಳು ಕನ್ನಡಿಗರ ಅಭಿಮಾನಿ ಬಳಗದ ಪ್ರಮುಖರಾದ ಎರ್ಮಾಳು ಹರೀಶ್ ಶೆಟ್ಟಿ ಈ ಮೆರವಣಿಗೆಯ ಮುಂದಾಳುತನವನ್ನು ವಹಿಸಿದ್ದು, ವಿವಿಧ ಸಮುದಾಯದ ಪ್ರಮುಖರು ಇದರಲ್ಲಿ ಬಾಗವಹಿಸಿದ್ದರು.

 

More Images