ಅನಿವಾಸಿ ಕರ್ನಾಟಕ ಕಲ್ಚರಲ್ ಸೆಂಟರ್ ವತಿಯಿಂದ ದುಬೈಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಅನಿವಾಸಿ ಕರ್ನಾಟಕ ಕಲ್ಚರಲ್ ಸೆಂಟರ್ ವತಿಯಿಂದ ದುಬೈಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Aug 25, 2017 01:47:38 PM (IST)
ಅನಿವಾಸಿ ಕರ್ನಾಟಕ ಕಲ್ಚರಲ್ ಸೆಂಟರ್ ವತಿಯಿಂದ ದುಬೈಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ದುಬೈ: ಕರ್ನಾಟಕ ಕಲ್ಚರಲ್ ಸೆಂಟರ್ ಇದರ ಅಧೀನದಲ್ಲಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆಐಸಿ) ಸಹಯೋಗದೊಂದಿಗೆ ಇಪ್ಪತ್ತೊಂದನೇ ವರ್ಷದ ಭಾರತೀಯ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮವನ್ನು ದೇರಾ ಬನಿಯಾಸ್ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು..ಅಬ್ದುಲ್ಸಲಾಂಬಪ್ಪಳಿಗೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲತೀಫ್ಕೌಡಿಚ್ಚಾರ್ವರು ಸ್ವಾಗತಿಸಿ ಮಾತನಾಡಿದ ಅವರು ಪ್ರವಾಸಿಯಾಗಿ ಉದ್ಯೋಗದ ನಡುವೆಯೂ ತಾಯಿನಾಡಿನ ರಾಷ್ಟ್ರೀಯ ಹಬ್ಬವನ್ನು ಆಯೋಜಿಸಿರುವುದು ನಮ್ಮಲ್ಲಿರುವ ರಾಷ್ಟ್ರಪ್ರೇಮವನ್ನು ಎತ್ತಿತೋರಿಸುತ್ತಿದೆ . ಇಂದು ಮಾಧ್ಯಮಗಳ ಮುಂದೆ, ಇತರ ಕೋಮುವಾದಿ ಶಕ್ತಿಗಳ ಮುಂದೆ ನಮ್ಮ ಸಮುದಾಯವು ರಾಷ್ಟ್ರ ಪ್ರೇಮವನ್ನು ಅಳೆದು ತೂಗಿ ತೋರ್ಪಡಿಸುವಂತಹದು ಸ್ಥಿತಿ ಬಂದಿರುವುದು ಖೇದಕರವಾಗಿದೆ.

ರಾಜಕೀಯ ಹಿತಾಸಕ್ತಿಗೋಸ್ಕರ ಒಂದು ಸಮುದಾಯವನ್ನು ರಾಷ್ಟ್ರವಿರೋಧಿ ಗುಂಪಿನಲ್ಲಿ ಗುರುತಿಸುವಂತಹ ಕೆಲಸಗಳಾಗುತ್ತಿದ್ದು ಇಂತಹವುಗಳನ್ನು ಯುವ ಸಮೂಹಗಳು ಅರಿತುಕೊಂಡು ಯುವಪೀಳಿಗೆಗಳಿಗೆ ಮಾದರಿಯಾಗುವಂತೆ ಕೇಳಿಕೊಂಡರು. ನಂತರ ಕಾರ್ಯಕ್ರಮದಲ್ಲಿ ಶಿಸ್ತಿನಿಂದ ಎದ್ದು ನಿಂತುಕೊಂಡು ರಾಷ್ಟ್ರಗೀತೆ ಹಾಡಲಾಯಿತು ಗೌರವಿಸಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾಜಿಮೊಹಿಯುದ್ದೀನ್ ಕುಟ್ಟಿ ದಿಬ್ಬರವರು, ಇಂದು ರಾಷ್ಟ್ರಕ್ಕೆ ಆಂಗ್ಲರಿಂದ ಸ್ವಾತಂತ್ರ್ಯ ಲಭಿಸಿರುವುದು ನಿಜವೇ ಆಗಿದ್ದು, ಬಡ ,ದೀನ - ದಲಿತ, ಅಲ್ಪಸಂಖ್ಯಾತ, ಸಮುದಾಯಕ್ಕೆ ಇಂದೂ ಸ್ವಾತಂತ್ರ್ಯವು ಕನಸಾಗಿದೆ.
ಬಾಯಿ ಮಾತಿನ ಮೂಲಕ ಈದಿನವನ್ನು ಕೇವಲ ಒಂದು ಘಂಟೆ ಅಥವಾ ಒಂದು ದಿನಕ್ಕೆಆಚರಣೆಗಾಗಿ ಉಪಯೋಗಿಸದೆ ಇಂತಹ ಕೆಳವರ್ಗದ ಜನರ, ಕೆಲವರ್ಗಗಳ ಸಮುದಾಯದ ಕಲ್ಯಾಣಕ್ಕಾಗಿ ನಮ್ಮಜೀವನವನ್ನು ಮುಡಿಪಾಗಿಡೋಣ ಎಂದುಕರೆನೀಡಿದರು.

ಜನ್ಮನೀಡಿದ ತಾಯಿ ಹಾಗೂ ಜನ್ಮಭೂಮಿಯನ್ನು ಪೀತಿಸುವಂತೆ ಕಲಿಸಿಕೊಟ್ಟ ಇಸ್ಲಾಮ್ ಧರ್ಮದ ಅನುಯಾಯಿಗಳಾದ ನಾವು ಅನಿವಾಸಿಗಳಾದರು, ಆ ಆಶಯದಂತೆ ತಾಯಿನಾಡಿನ ಸಂತೋಷದ ದಿನವನ್ನುಕೊಂಡಾಡುತ್ತಿದ್ದೇವೆ. ಎಲ್ಲಾಧರ್ಮಗಳು ಪ್ರತಿಪಾದಿಸುತ್ತಿರುವ ಶಾಂತಿಯಿಂದ ಕೂಡಿದ ಜೀವನವು ನಮ್ಮದಾಗಲಿ ಎಂದು ಶುಭಹಾರೈಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಯ್ಯದ್ ಅಸ್ಕರಲಿ ತಂಘಳ್ ಕೊಲ್ಪೆರವರು ಮಾತನಾಡಿ, ಸ್ವಾತಂತ್ರ್ಯದಿನಾಚರಣೆಯು ದೇಶಪ್ರೇಮ ವಿಶ್ವಾಸದ ಭಾಗವೆಂದು ಸಾರಿದ ಇಸ್ಲಾಮಿನ ಅನುಯಾಯಿಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತವು ನಮ್ಮಜನ್ಮಬೀಡು, ಉದ್ಯೋಗ ಅರಸಿ ಈ ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರಾದ ನಾವು ಜೀವನಸಾಗಿಸುತ್ತಿದ್ದರೂ ತಮ್ಮ ದೇಶಪ್ರೇಮವನ್ನು ತ್ರಿವರ್ಣಧ್ವಜದೊಂದಿಗೆ ಸಂತೋಷದಿಂದ ಆಚರಿಸುತ್ತಿದ್ದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಕಾರ್ಯಕ್ರಮಕ್ಕೆಶುಭ ಹಾರೈಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಶ್ರಫ್ ಖಾನ್ ಮಾಂತೂರ್ ರವರು, ಇಂದು ಅನಿವಾಸಿಗಳಾದ ನಾವೆಲ್ಲರೂ ಒಂದುಗೂಡಿ ಜನ್ಮನಾಡಿನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದರಲ್ಲಿ ಅತೀವ ಸಂತೋಷವಿದ್ದು, ಈ ದಿನವನ್ನು ಕೇವಲ ರಾಷ್ಟ್ರಪತಾಕೆಯನ್ನು ಹಿಡಿದು ಇತರರೆಡೆಯಲ್ಲಿ ತಾನೋರ್ವನೇ ರಾಷ್ಟ್ರಪ್ರೇಮಿ ಎಂದು ಬಿಂಬಿಸಲು ಉಪಯೋಗಿಸದೆ, ಬಡಸಮಾಜದ, ಸಮುದಾಯದ ಸಬಲೀಕರಣಕ್ಕಾಗಿ ವಿನಿಯೋಗಿಸುವಂತೆ ಕೇಳಿಕೊಂಡರು.

ಇನ್ನೋರ್ವ ಮುಖ್ಯ ಅತಿಥಿ ಸಲೀಂ ಅಲ್ತಾಫ್ ಫರಂಗಿಪೇಟೆರವರು ಮಾತನಾಡಿ, ತಮ್ಮಬಾಲ್ಯ ಶಾಲಾ ದಿನಗಳಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯಕ್ಕೂ ಇಂದು ಆಚರಿಸುತ್ತಿರುವ ದಿನಕ್ಕೂ ಅಜಗಜಾಂತರ ವ್ಯತ್ಯಾಸಗಳು ಕಂಡುಬರುತ್ತಿದೆ. ಅಂದಿನ ದಿನಗಳಲ್ಲಿ ಸ್ವಾತಂತ್ರ್ಯ ದಿನಕ್ಕಾಗಿ ಹೋರಾಡಿ ವೀರಮರಣ್ಣವನ್ನಪ್ಪಿದ ಧೀರರನ್ನು ನೆನೆದು ಕಂಬನಿ ಮಿಡಿದು ಆಚರಿಸುತ್ತಿದ್ದ ಆದಿನವನ್ನು ಇಂದು ಕೋಮುವಾದ ಮೂಲಕ ವಿಭಜಿಸಿ ವಿವಿಧ ಮತಧರ್ಮ ಭಾಷೆಗಳಿಗನುಣುವಾಗಿವಿಂಗಡಿಸಲಾಗುತ್ತಿದ್ದು ,ಇದು ವಿಷಾದನೀಯ. ಇಂತಹ ಸಂಧರ್ಭಗಳಲ್ಲಿ ಯುವ ಸಮೂಹಗಳುಮುಂದೆ ಬಂದು, ಮುಂದಿನ ಪೀಳಿಗೆಗೆ ಚರಿತ್ರೆಯನ್ನುತಿಳಿಯಪಡಿಸುವಂತೆಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಬದ್ರುದ್ದೀನ್ ಹೆಂತಾರ್ ರವರು ಮಾತನಾಡಿ 71 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೌಲಾನಾ ಮುಹಮ್ಮದಲಿ, ಶೌಕತ್ಅಲಿ ಹಾಗೂ ತನ್ನ ಈ ಇಬ್ಬರು ಮಕ್ಕಳನ್ನೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರೂತ್ಸಾಹಿಸಿ ಮಕ್ಕಳನ್ನು ದೇಶಕ್ಕೆ ಸಮರ್ಪಿಸಿದ ಅವರ ತಾಯಿ ಆಬಿದಾ ಬೇಗಂ ಅವರ ತ್ಯಾಗವನ್ನು ನೆನಪಿಸುತ್ತಾ ಸ್ವಾತಂತ್ರ್ಯಕ್ಕಾಗಿ ಜಾತಿ ಮತ ಧರ್ಮ ನೋಡದೆ ಅಂದಿನ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮಗಾಂಧೀಜಿ ನೆಹರು ಮತ್ತು ಸಂಗ್ರಾಮದಲ್ಲಿ ಜೊತೆ ಸೇರಿದ ಮುಸ್ಲಿಂ ಹಿಂದು ಕ್ರೈಸ್ತರನ್ನೊಳಗೊಂಡ ಸರ್ವಧರ್ಮಾನುಯಾಯಿ ಹೋರಾಟಗಾರರೂ ಸ್ಮರಣೀಯರು, ಅವರು ನಮ್ಮದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ಅರಿತು ಸರ್ವ ಭಾರತೀಯನೂ ಒಗ್ಗಟ್ಟಾಗಿ ಐಕ್ಯತೆಯಲ್ಲಿ ಜೀವಿಸಬೇಕಾದುದು ಅನಿವಾರ್ಯ ಎಂದು ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ನೂರ್ ಮಹಮ್ಮದ್ ನಿರ್ಕಾಜೆಯವರು ಮಾತನಾಡುತ್ತಾ, ತನ್ನ ತಾಯಿ ನಾಡನ್ನು ಪ್ರೀತಿಸದವನು ಖಂಡಿತವಾಗಿಯೂ ಮುಸ್ಲಿಮನಾಗಲಾರ ಎಂದು ಕಳಿಸಿದ ಪವಿತ್ರ ಇಸ್ಲಾಮ್ಧರ್ಮದ ಅಣಿಯಾಯಿಗಳಾದ ನಾವು ಆ ಆಶಯದಂತೆ ಅನಿವಾಸಿಗಳಾದರು ಕೂಡ ತ್ರಿವರ್ಣ ದ್ವಜವನ್ನು ಹಿಡಿದುಕೊಂಡು ತಾಯಿ ನಾಡಿನ ಸ್ವಾತಂತ್ರೋತ್ಸವ ದಿನವನ್ನು ಸಂತೋಷದಿಂದ ಆಚರಿಸುತ್ತಿದ್ದೇವೆ. ಆದರೆ ಇಂದು ಸಮಾಜವು ಕೇವಲ ಒಂದು ವರ್ಗವನ್ನೇ ರಾಷ್ಟ್ರಪ್ರೇಮಿಗಳೆಂದು ವರ್ಣಿಸುತ್ತಾ ಇಂದು ಕೋಮುವಾದಿ ಶಕ್ತಿಗಳು ನಮ್ಮನ್ನು ರಾಷ್ಟ್ರವಿರೋಧಿಗಳಾಗಿ ಚಿತ್ರೀಕರಿಸಿ ಅದನ್ನೇ ಮಾಧ್ಯಮಗಳು ತೋರಿಸುತ್ತಿರುವುದರಿಂದ ಯುವಪೀಳಿಗೆಗಳು ಸ್ವಾತಂತ್ರ್ಯ ದಿನದ ಮಹತ್ವವನ್ನೇ ಅರಿಯದಂತಾಗಿದೆ. ಆದ್ದರಿಂದ ಯುವ ಸಮೂಹಗಳು ಚರಿತ್ರೆಯನ್ನು ಓದಿ ತಿಳಿದುಕೊಂಡು ನೈಜ ಸ್ವಾತಂತ್ರ್ಯದಿನವನ್ನು ಅರಿಯಬೇಕಾಗಿದೆ ಎಂದು ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಹಾರೈಸಿದರು.

ನಂತರ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅಬ್ದುಲ್ ಲಾಂಬಪ್ಪಳಿಗೆರವರುಮಾತನಾಡಿ, ದೇಶ ಪ್ರೇಮ ಎಂಬುದು ಈ ಮಾನಿನ ಒಂದು ಭಾಗವಾಗಿದ್ದು ಓರ್ವ ಪರಿಪೂರ್ಣ ಮುಸ್ಲಿಮನಾಗಿದ್ದಲ್ಲಿ ಆತ ಹೆತ್ತ ತಾಯಿ ಹೊತ್ತ ಭೂಮಿಯನ್ನು ಪ್ರೀತಿಸಿ ಗೌರವಿಸಬೇಕು. ದೇಶಪ್ರೇಮ ಎಂಬುದು ಇತರ ಸಹೋದರ ಸಮುದಾಯಗಳೆಡೆಯಲ್ಲಿ ತೋರ್ಪಡಿಕೆಗೆ ಮಾತ್ರವಾಗಿರದೆ ಹೃದಯಾಂತರಾಳದಿಂದ ಪ್ರೀತಿಸುವಂತಾಗಿರಬೇಕು ಎಂದರು. ಇಂದು ಭಾರತದಾದ್ಯಂತ ಮೂಲೆ ಮೂಲೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಿಡಿದು ಆಚರಿಸುತ್ತಿರುವ ಈ ಸಂಧರ್ಭದಲ್ಲಿ ಶಾಂತಿ ಸಹಬಾಳ್ವೆಯಾ ಸಂಖೇತವಾಗಿರುವ ಆ ಧ್ವಜದ ಅರ್ಥವನ್ನೇ ಅರಿಯದೆ ವಿನಾ ಅಶಾಂತಿ ಸೃಷ್ಠಿಸುತ್ತಿರುವ ಸಮೂಹಗಳು ಎಚ್ಛೆತ್ತುಕೊಳ್ಳಬೇಕಾಗಿದ್ದು ಅಂತಹವುಗಳನ್ನು ಹೆಮ್ಮೆಟ್ಟಿಸುವಲ್ಲಿ ನಮ್ಮ ಯುವ ಸಮೂಹವು ಮುಂದೆ ಬರಬೇಕಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಹಾಜಿ ಮನಿಲಾ, ಅಬ್ಬಾಸ್ ಕೇಕುಡೆ, ಅಶ್ರಫ್ ಪರ್ಲಡ್ಕ, ನಾಸೀರ್ ಬಪ್ಪಳಿಗೆ, ರಿಫಾಯಿ, ಅನ್ಸಾಫ್ ಪಾತೂರ್, ಷರೀಫ್ ಕೊಡಿನೀರ್, ಮೊದಲಾದವರು ಸ್ವಾತಂತ್ರ್ಯೋತ್ಸವ ದಿನದ ಮಹತ್ವದೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದುಬೈSKSSF ಕರ್ನಾಟಕ ಸಮಿತಿ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ, ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಯುಎಇ ಸಮಿತಿ, ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಯುಎಇ ಸಮಿತಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯುಎಇ ಸಮಿತಿ, ಕರ್ನಾಟಕ ಕಲ್ಚರಲ್ ಸೆಂಟರ್ ರ್ಮೊದಲಾದ ಸಂಘ ಸಂಸ್ಥೆಗಳ ನೇತಾರರು ಹೈತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಅಶ್ರಫ್ ಪರ್ಲಡ್ಕರವರು ಕಾರ್ಯಕ್ರಮವನ್ನು ನಿರೂಪಿಸಿ ಅಝೀಝ್ ಸೊಂಪಾಡಿ ವಂದಿಸಿದರು.