ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ 12ನೇ ವಾರ್ಷಿಕೋತ್ಸವ

ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ 12ನೇ ವಾರ್ಷಿಕೋತ್ಸವ

HSA   ¦    Feb 03, 2018 03:47:04 PM (IST)
ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ 12ನೇ ವಾರ್ಷಿಕೋತ್ಸವ

ಮುಂಬಯಿ: ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘ ಚೆಂಬೂರು ಇದರ 12ನೇ ವಾರ್ಷಿಕೋತ್ಸವವು ಜ.27ರಂದು ಇಲ್ಲಿನ ಗಣೇಶ್ ಮೈದಾನದಲ್ಲಿ ತುಂಬಾ ವಿಜೃಂಭಣೆಯಿಂದ ನಡೆಯಿತು.

ಮಹಿಳಾ ವಿಭಾಗದಿಂದ ಭಜನೆ, ಯಕ್ಷಗಾನ ಮತ್ತು ಅರಶಿನ ಕುಂಕುಮ ಕಾರ್ಯಕ್ರಮಗಳು ನಡೆದವು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಸಿಎ ವಿಶ್ವನಾಥ್ ಶೆಟ್ಟಿ, ಭಾರತ್ ಬ್ಯಾಂಕ್ ಭಾಂಡೂಪ್ ಶಾಖೆಯ ಮ್ಯಾನೇಜರ್ ಜಯಂತಿ ಪೂಜಾರಿ ಅವರು ವೇದಿಕೆಯಲ್ಲಿದ್ದರು.

ಸ್ಟಾರ್ ಪ್ಲಸ್ ಚಾನೆಲ್ ಆಯೋಜಿಸಿದ್ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ನಲ್ಲಿ ಪ್ರಥಮ ರನ್ನರ್ ಅಪ್ ಪಡೆದ ನಿತೇಶ್ ಬಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.