ಪುಣೆಯಲ್ಲಿ ಯಕ್ಷಸಂಭ್ರಮ-2018 ಸಮಾರೋಪ

ಪುಣೆಯಲ್ಲಿ ಯಕ್ಷಸಂಭ್ರಮ-2018 ಸಮಾರೋಪ

HSA   ¦    Dec 31, 2018 11:19:50 AM (IST)
ಪುಣೆಯಲ್ಲಿ ಯಕ್ಷಸಂಭ್ರಮ-2018 ಸಮಾರೋಪ

ಪುಣೆ: ಡಿ. 23 ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಆಶ್ರಯದಲ್ಲಿ ನಡೆದ ಯಕ್ಷಸಂಭ್ರಮ -2018 ರ ಸಮಾರೋಪ ಸಮಾರಂಭ ನಡೆಯಿತು.

ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರೊ| ಎಂ. ಎ. ಹೆಗಡೆ, ಮುಖ್ಯವಾಗಿ ನಮ್ಮ ಕರ್ನಾಟಕದ ಒಳನಾಡಿ ನಲ್ಲಿದ್ದಾಗ ನಮ್ಮ ಭಾಷೆ ಸಂಸ್ಕೃತಿಗಳ ಬಗ್ಗೆ ಇಲ್ಲದ ಭಾವ, ಬೇರುಗಳ ಹುಡುಕಾಟ, ಊರನ್ನು ಬಿಟ್ಟು ಹೊರನಾಡಿನಲ್ಲಿದ್ದಾಗ ಹೆಚ್ಚು ಎಂಬುವುದನ್ನು ಇಲ್ಲಿನ ಕನ್ನಡಿಗರನ್ನು ಕಂಡಾಗ ಪುಣೆಯಲ್ಲಿ ನಾನು ಅರಿತುಕೊಂಡೆ ಎಂದರು.

ಯಕ್ಷಗಾನ ಕರಾವಳಿ ಹಾಗೂ ಮಲೆನಾಡಿನ ಜನರ ಸಾಂಸ್ಕೃತಿಕವಾದ ಬೇರಾಗಿದೆ. ಅದು ನಮ್ಮ ರಕ್ತದ ಕಣಕಣಗಳಲ್ಲಿ ಬದುಕಿನಲ್ಲಿ ಅವಿಭಾಜ್ಯವಾಗಿ ಸೇರಿಕೊಂಡಿದ್ದು ಅದನ್ನು ಜಾಗೃತಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಬಹುದಾಗಿದೆ. ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಮಾತನಾಡಿ, ನಮ್ಮ ನಾಡಿನ ಕಲೆಯಾದ ಯಕ್ಷಗಾನದೊಂದಿಗೆ ನಾವು ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ್ದೇವೆ. ಸಾಧಾರಣವಾಗಿ ಯಕ್ಷಗಾನವನ್ನು ಉಳಿಸುವ ಬೆಳೆಸುವ ಮಾತನ್ನು ಮಾತಿನಲ್ಲಿ ತೋರ್ಪ ಡಿಸುವವರೇ ಹೆಚ್ಚಾಗಿ ಕಾಣಸಿಗುತ್ತಾರೆ. ಅಂತಹ ಮಾತಿಗೆ ಅಪವಾದವೆಂಬಂತೆ ಪುಣೆ ಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡ ಳಿಯ ಮೂಲಕ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಮತ್ತಿತರ ಕಲಾವಿದರು ನಾಟ್ಯ ತರಬೇತಿ ನೀಡಿ ಯಕ್ಷಗಾನ ಕಲೆಯನ್ನು ಉಳಿಸುವ ಕಾಯಕದಲ್ಲಿ ತೊಡಗಿಸಿ ಕೊಂಡಿರುವುದು ಅಭಿನಂದನೀಯವಾಗಿದೆ. ಎಂದು ಹೇಳಿದರು.
ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು