ಶಾಂತಿಧಾಮ ಸೇವಾ ಸಮಿತಿಯ 7ನೇ ವಾರ್ಷಿಕ ವರ್ಧಂತಿ ಉತ್ಸವ

ಶಾಂತಿಧಾಮ ಸೇವಾ ಸಮಿತಿಯ 7ನೇ ವಾರ್ಷಿಕ ವರ್ಧಂತಿ ಉತ್ಸವ

HSA   ¦    May 14, 2018 01:41:26 PM (IST)
ಶಾಂತಿಧಾಮ ಸೇವಾ ಸಮಿತಿಯ 7ನೇ ವಾರ್ಷಿಕ ವರ್ಧಂತಿ ಉತ್ಸವ

ಮುಂಬಯಿ: ಜಿಎಸ್ ಬಿ ಸಮುದಾಯದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಏಳನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಮೇ 6ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.

ವೇದಮೂರ್ತಿ ಗಿರಿಧರ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಗಾಯಕ ಸಂಜಯ್ ನಾಡಕರ್ಣಿ ಮತ್ತು ತಂಡದವರಿಂದ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು.

ಕನ್ನಡ, ಕೊಂಕಣಿ ಹಾಗೂ ಮರಾಠಿ ಭಜನೆಗಳನ್ನು ಹಾಡಿದ ತಂಡದವರು ನೆರೆದಿದ್ದ ಭಕ್ತಾದಿಗಳನ್ನು ಮನರಂಜಿಸಿದರು. ತಂಡದ ಎಲ್ಲರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.