ದಹಿಸರ್ ವೈಶಾಲಿ ನಗರದಲ್ಲಿ ೨೪ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ

ದಹಿಸರ್ ವೈಶಾಲಿ ನಗರದಲ್ಲಿ ೨೪ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ

Dec 19, 2018 03:50:13 PM (IST)
ದಹಿಸರ್ ವೈಶಾಲಿ ನಗರದಲ್ಲಿ ೨೪ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ

ಮುಂಬಯಿ: ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಮಂಡಳಿ, ಮೋಹನ್ ಅರ್ಜುನ ನಗರ, ದಹಿಸರ್ ಪೂರ್ವ ಇದರ ವತಿಯಿಂದ 24ನೇ ವಾರ್ಷಿಕ ಅಯ್ಯಪ್ಪ ಮಹೋತ್ಸವವು ಸಹಸ್ರ ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊ೦ದಿಗೆ ಈಚೆಗೆ ಮಂಡಳಿಯ ಸ್ವಂಥ ಜಾಗದಲ್ಲಿ ನಿರ್ಮಿಸಿದ ಅಯ್ಯಪ್ಪ ಮಂದಿರದಲ್ಲಿ ನೆರವೇರಿತು.

ಅಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರಾಣ ಪ್ರತಿಷ್ಠೆ ಮತ್ತು ದೀಪಾರಾದನೆ ನಂತರ ಹನುಮಾನ ಭಜನಾ ಮಂಡಳಿಯವರಿಂದ ಭಜನೆ, ಮಹಾದೀಪಾರಾಧನೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸತೀಶ್ ಗುರುಸ್ವಾಮಿ ಮತ್ತು ಇನ್ನಂಜೆ ಪ್ರಕಾಶ್ ಗುರುಸ್ವಾಮಿ ಅವರ ಅಯ್ಯಪ್ಪ ಸ್ವಾಮಿಯ ಮಂತ್ರ ಘೋಷಣೆಯೊಂದಿಗೆ ಉಮೇಶ್ ಕಾಂತಾವರ ಗುರುಸ್ವಾಮಿ ಅವರು ಮಂಗಳಾರತಿ ನೆರವೇರಿಸಿದರು.

ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಮಂಡಳಿ ಯ ಅಧ್ಯಕ್ಷರಾದ ಸುರೇಶ್ ವೈ. ಶೆಟ್ಟಿ, ಕಾರ್ಯದರ್ಶಿ ಸತೀಶ್ ಗುರುಸ್ವಾಮಿ, ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಸುಧಾಕರ ಕೆ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸದಾನಂದ ಪೂಜಾರಿ, ಸುಧಾಕ ಅಣ್ಣಾ, ನ್ಯಾಯವಾದಿ ಹರೀಶ್ ಶೆಟ್ಟಿ, ಭಾಸ್ಕರ ನಾಡಾರ್, ಜಯಪ್ರಕಾಶ ಚೆಟ್ಟಿಯಾರ್, ಮಂಡಳಿಯ ಇತರ ಸದಸ್ಯರುಗಳು, ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನದ ಸದಸ್ಯರುಗಳು, ಅಯ್ಯಪ್ಪ ಭಕ್ತರು ಪೂಜೆಯ ಯಶಸ್ಸಿಗೆ ಸಹಕರಿಸಿದರು. ಸಂಸದ ಗೋಪಾಲ ಶೆಟ್ಟಿ, ಸ್ಥಳೀಯ ಶಾಸಕರು, ನಗರ ಸೇವಕರು ಹಾಗೂ ತುಳುಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.