ರಾಕ್ ಕನ್ನಡ ಸಂಘದಿಂದ ಕನ್ನಡ ಮಕ್ಕಳ ಕಾರ್ಯಕ್ರಮ

ರಾಕ್ ಕನ್ನಡ ಸಂಘದಿಂದ ಕನ್ನಡ ಮಕ್ಕಳ ಕಾರ್ಯಕ್ರಮ

YK   ¦    Jun 21, 2019 10:07:08 AM (IST)
ರಾಕ್ ಕನ್ನಡ ಸಂಘದಿಂದ ಕನ್ನಡ ಮಕ್ಕಳ ಕಾರ್ಯಕ್ರಮ

ದುಬೈ: ರಾಸ್ ಅಲ್ ಕೈಮಾ ( ರಾಕ್ ) ಎಂಬುದು ಸಂಯುಕ್ತ ಅರಬ್ ಸಂಸ್ಥಾನದ 7 ರಾಜ್ಯಗಳಲ್ಲಿ ಒಂದು. ರಾಕ್ ಕನ್ನಡ ಸಂಘದಿಂದ ಜೂ.14ರಂದು ನಡೆದ ಕನ್ನಡ ಮಕ್ಕಳ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಗುರು ಮಾಧವ್ ರಾವ್ ದಂಪತಿ, ಯುಎಇ ಕನ್ನಡಿಗರು ದುಬೈ ಕುಟುಂಬದ ವಿಷ್ಣುಮೂರ್ತಿ ಮೈಸೂರು ಮತ್ತು ರಫೀಕಲಿ ಕೊಡಗು ಅವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಗಣ್ಯರು, ರಾಕ್ ಕನ್ನಡಿಗರಿಗೆ ಕನ್ನಡ ಪರ ಕೆಲಸ ಮಾಡಲು ಉತ್ಸಾಹ ನೀಡುವ ಮಾತುಗಳನ್ನು ಆಡಿದರು. ಕನ್ನಡ ಮಕ್ಕಳ ಕಾರ್ಯಕ್ರಮಗಳು ವರ್ಣ ರಂಜಿತವಾಗಿ ಮೂಡಿಬಂದಿದೆ. ವಿಶೇಷ ಎಂಬತೆ ಕರ್ನಾಟಕದ ಸಾಂಪ್ರದಾಯಿಕ ಮನೆ ಊಟ ಅಡುಗೆ ಮಾಡಿ ಬಂದ ಅತಿಥಿ ಸಭಿಕರಿಗೆ ಬಡಿಸಲಾಯಿತು.

ರಾಕ್ ಕನ್ನಡ ಸಂಘದ ಮುಖ್ಯ ಆಯೋಜಕರಾದ ಡಾಕ್ಟರ್ ಲೇಖಾ ಕೊಡಗು, ಸತ್ಯ-ಮೌಶ್ಮಿ, ಮಹೇಶ್ ಪಟೇಲ್ , ಶಶಿಕಲ, ಕಿಶೋರ್-ಅಕ್ಷತಾ, ಈರಣ್ಣ-ಅನುಪಮಾ, ಪ್ರಸಾದ್-ಆಶಾ, ಉಮೇಶ್ಮಂಜು, ಡಯಾನಾ, ಡಾ.ರಾಧಿಕಾ, ಖಾಲಿದ್-ಫರ್ಹಿನ್, ಶ್ರೀಲತಾ, ಸಂದೀಪ್-ಜೇಷ್ಮ, ರೋಹಿತ್-ಹರ್ಷಿತಾ, ಡಾ.ಅನಿಲ್ ಶೆಟ್ಟಿ-ಅಮಿತಾ, ರೂಪ, ವೇಧವ್ಯಾಸ್-ಸುಮನಾ, ಡಾ. ಶಾಂತಿಲತ ಗುರುಪ್ರಸಾದ್ ,ಅಮಿತಾ ,ಮಂಜು, ಸಂಪತ್ ಶೆಟ್ಟಿ, ಮತ್ತು ಸಂತೋಷ್ ಶೆಟ್ಟಿ ಮುಂತಾದವರ ಪರಿಶ್ರಮದಿಂದ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು.

 

More Images