ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಗೆ ಭಡ್ತಿ

ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಗೆ ಭಡ್ತಿ

HSA   ¦    Oct 27, 2018 03:08:41 PM (IST)
ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಗೆ ಭಡ್ತಿ

ಮುಂಬಯಿ: ಕರಾವಳಿ ಮೂಲದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಮುಂಬಯಿ ಪೊಲೀಸ್ ಇಲಾಖೆಯಲ್ಲಿ ಭಡ್ತಿ ಸಿಕ್ಕಿದೆ.

ಅಂಬೋಲಿ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ದಯಾ ನಾಯಕ್ ಅವರಿಗೆ ಮುಂಬಯಿ ಸಿಟಿ ವಲಯಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಭಡ್ತಿ ನೀಡಲಾಗಿದೆ.

ಒಂದು ಕಾಲದಲ್ಲಿ ಎನ್ ಕೌಂಟರ್ ನಿಂದಲೇ ಭೂಗತ ಲೋಕಕ್ಕೆ ದುಸ್ವಪ್ನವಾಗಿದ್ದ ದಯಾ ನಾಯಕ್ ಅವರಿಗೆ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ ಎಂದು ಮುಂಬಯಿ ವಿಶೇಷ ಪೊಲೀಸ್ ಮಹಾ ನಿರೀಕ್ಷಕ ರಾಜ್ ಕುಮಾರ್ ವ್ಯಾಡ್ಕರ್ ಹೇಳಿದ್ದಾರೆ.