ಮುಂಬೈ ಜೈನ ಸಂಘದಿಂದ ಮಹಾವೀರ ಜಯಂತಿ

ಮುಂಬೈ ಜೈನ ಸಂಘದಿಂದ ಮಹಾವೀರ ಜಯಂತಿ

YK   ¦    Apr 23, 2019 04:01:18 PM (IST)
ಮುಂಬೈ ಜೈನ ಸಂಘದಿಂದ ಮಹಾವೀರ ಜಯಂತಿ

ಮುಂಬೈ: ಈಚ3ಗೆ ಅಖಿಲ ಕರ್ನಾಟಕ ಜೈನ ಸಂಘ ಮುಂಬೈ ವತಿಯಿಂದ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.

ಮುಂಬ್ರಾದ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೊದಲಿಗೆ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು. ದೇವರಿಗೆ ವಿಶೇಷ ಅಭಿಷೇಕ, ವಿವಿಧ ದ್ರವ್ಯಾಭಿಷೇಕ, ಚತುಷೋನ ಕಲಶಾಭಿಷೇಕ, ಪೂರ್ಣ ಕುಂಭ ಕಲಶಾಭಿಷೇಕ, ನಾಮಕರಣ ವಿಧಿವಿಧಾನಗಳನ್ನು ಕಾರ್ಕಳ ಪರಪ್ಪಾಡಿಯ ಜಿನಸೇನ ಇಂದ್ರರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಅಧ್ಯಕ್ಷ ಮುನಿರಾಜ ವಹಿಸಿಕೊಂಡಿದ್ದರು.