ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇ ಗೌಡರಿಗೆ ಸಮ್ಮಾನ

ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇ ಗೌಡರಿಗೆ ಸಮ್ಮಾನ

HSA   ¦    Apr 05, 2018 12:30:30 PM (IST)
ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇ ಗೌಡರಿಗೆ ಸಮ್ಮಾನ

ನವದೆಹಲಿ: ದೆಹಲಿ ಕರ್ನಾಟಕ ಸಂಘದ ವತಿಯಿಂದ ಎ.1ರಂದು ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇ ಗೌಡ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೊಡ್ಡರಂಗೇ ಗೌಡ ಅವರು, ನನಗೆ ಬರವಣಿಗೆ ಅನ್ನುವುದು ಒಂದು ತಪಸ್ಸು. 1960ನೇ ಸಾಲಿನಲ್ಲಿ ಬರೆಯಲು ಪ್ರಾರಂಭಿಸಿದೆ. ಬರೆಯುತ್ತಾ ಹೋದೆ, ಬೆಳೆಯುತ್ತಾ ಹೋದೆ. ಕನ್ನಡವನ್ನೇ ನಿಚ್ಚಳವಾಗಿ ಬಳಸುತ್ತಾ ಹೋದೆ. ನನ್ನ ಬದುಕಿನ ಎಳೆಎಳೆಯು ಕೂಡ ನನ್ನ ಬರವಣಿಗೆಯಲ್ಲಿದೆ. ಲೇಖನ ಸುತ್ತಲಿನ ಸಮಾಜ ಗಮನಿಸುತ್ತಾ ಬರೆಯಬೇಕು. ಸಮಾಜದ ಓರೆಕೋರೆಗಳನ್ನು ಗಮನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.