ಅಬುಧಾಬಿಯಲ್ಲಿ ಗೌ. ಶೇಖ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮಶತಾಬ್ಧಿ ಉದ್ಘಾಟನೆ

ಅಬುಧಾಬಿಯಲ್ಲಿ ಗೌ. ಶೇಖ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮಶತಾಬ್ಧಿ ಉದ್ಘಾಟನೆ

YK   ¦    May 11, 2018 03:04:45 PM (IST)
ಅಬುಧಾಬಿಯಲ್ಲಿ ಗೌ. ಶೇಖ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮಶತಾಬ್ಧಿ ಉದ್ಘಾಟನೆ

ಇಂಡಿಯಾ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯಲ್ಲಿ ವರ್ಷಪೂರ್ತಿ ನಡೆಸಲು ಯೋಚಿಸಿದ ಗೌ. ಶೇಖ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮಶತಾಬ್ಧಿ ವರ್ಷಾಚರಣೆ ಮತ್ತು ಐ.ಎಸ್.ಸಿ. 51ನೇ ವಾರ್ಷಿಕೋತ್ಸವ ಗುರುವಾರ ರಾತ್ರಿ ಜ್ಯೋತಿ ಬೆಳಗುವುದರ ಮೂಲಕ ವರ್ಣರಂಜಿತ ಸಮಾರಂಭದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಪ್ರಧಾನ ಕಾರ್ಯದರ್ಶಿ ಈಪನ್ ಮಮ್ಮುಟ್ಟಿ ಸರ್ವರನ್ನು ಸ್ವಾಗತಿಸಿದರು.

ಐ ಎಸ್. ಸಿ. ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಲುಲು ಗ್ರೂಪ್ ಇಂಟನ್ಯರ್ ನ್ಯಾಶನಲ್ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಡಾ. ಯೂಸಫ್ ಎಂ. ಎ. ಹಾಗೂ ಉಪಾಧ್ಯ ಮತ್ತು ಎನ್. ಎನ್.ಎಂ.ಸಿ. ಹೆಲ್ತ್ ಕೇರ್ ಸ್ಥಾಪಕ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಭಾರತೀಯ ರಾಯಬಾರಿ ಕಛೇರಿ ಪ್ರಥಮ ಕಾರ್ಯದರ್ಶಿ ದಿನೇಶ್ ಕುಮಾರ್ ಗೌ. ಶೇಖ್ ಝಾಯದ್ ಸುಲ್ತಾನ್ ಅಲ್ ನಯ್ಯಾನ್ ಜನ್ಮಶತಾಬ್ಧಿ ವರ್ಷಾಚರಣೆಗೆ ಚಾಲನೆ ನೀಡಿದರು.

ಐ.ಎಸ್.ಸಿ.ಯ ನೂತನ ಅಧ್ಯಕ್ಷರಾದ ರಮೇಶ್ ವಿ. ಪಣಿಕರ್ ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಐ.ಎಸ್.ಸಿ. ನಡೆದು ಬಂದ ಹಾದಿ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಭಾಷಣದಲ್ಲಿ ವಿವರಿಸಿದರು.
ಅಧ್ಯಕ್ಷ ಡಾ. ಯೂಸುಫ್ ಎಂ. ಎ. ನೂತನ ಆಡಳಿತ ಮಂಡಳಿಗೆ ಶುಭವನ್ನು ಹಾರೈಸಿದರು. ಉಪಾಧ್ಯಕ್ಷ ಡಾ. ಬಿ. ಆರ್. ಶೆಟ್ಟಿಯವರು ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಅಗಮಿಸಿದ ದಿನೇಶ್ ಕುಮಾರ್ ಶುಭ ಸಂದೇಶ ನೀಡಿದರು.

ನೂತನ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷ ಡಾ. ಯೂಸುಫ್ ಎಂ. ಎ. ಪ್ರತಿಜ್ಞಾವಿದಿ ಭೋದಿಸಿದರು.

ಐ.ಎಸ್.ಸಿ.ಯ ನೂತನ ಗೌ. ಅಧ್ಯಕ್ಷರಾದ ರಮೇಶ್ ವಿ. ಪಣಿಕರ್, ಗೌ.ಉಪಾಧ್ಯಕ್ಷರು ಜಯರಾಮ್ ರೈ, ಗೌ. ಪ್ರಧಾನ ಕಾರ್ಯದರ್ಶಿ ಈಪನ್ ಮಮ್ಮುಟ್ಟಿ, ಗೌ. ಸಹಕಾರ್ಯದರ್ಶಿ ದಿಲಿಪ್ ಕುಮಾರ್, ಸಹಖಜಾಂಚಿ ಶ್ರೀನಿವಾಸುಲು, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಕುಮಾರ್ ಗೋಪಿನಾಥ್, ಕ್ರೀಡಾ ಕಾರ್ಯದರ್ಶಿ ರಮೇಶನ್, ಕಾರ್ಯದರ್ಶಿ ಪೂರ್ವ ಪ್ರಾಂತ್ಯ-ಶುಭಾಂಕರ್ ಘೋಷ್, ಕಾರ್ಯದರ್ಶಿ ಪಶ್ಚಿಮ - ಚೈತನ್ಯ ಮಹಾವೀರ್ ಶಾಹ, ಕಾರ್ಯದರ್ಶಿ ಉತ್ತರ ಪ್ರಾಂತ್ಯ - ಅಲೋಕ್ ತುತೆಜಾ, ಕಾರ್ಯದರ್ಶಿ ದಕ್ಷಿಣ ಪ್ರಾಂತ್ಯ - ಮಹಮ್ಮದ್ ರಾಶೀದ್, ಆಡಿಟರ್ ಶ್ರೀ ಜಿ. ಎನ್. ಶಶಿಕುಮಾರ್, ಸಹ ಆಡಿಟರ್ ಶ್ರೀ ಮೆಯಿಅಪ್ಪನ್ ಪಳನಿಯಪ್ಪನ್.

ಸಭಾಕಾರ್ಯಕ್ರಮದ ನಂತರ ಬಾಲಿಹುಡ್ ಗಾಯಕಿ ಹಂಸಿಕಾ ಅಯ್ಯರ್ ಮತ್ತು ವಿಪಿನ್ ಅನೆಜ ಸಂಗೀತ ರಸಮಂಜರಿ ಡಾ. ನವ್ಯ ಅಯ್ಯರ್ ತಂಡ ಮತ್ತು ರಾಜಸ್ಥಾನಿ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಸಾಹಿಲ್ ಮತ್ತು ಡಾ ಅಪರ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು.