ಸಂಸದ ಗೋಪಾಲ ಶೆಟ್ಟಿಯವರಿಗೆ ಅಭಿನಂದನೆಗಳ ಮಹಾಪೂರ

ಸಂಸದ ಗೋಪಾಲ ಶೆಟ್ಟಿಯವರಿಗೆ ಅಭಿನಂದನೆಗಳ ಮಹಾಪೂರ

IM   ¦    May 26, 2019 05:55:18 PM (IST)
ಸಂಸದ ಗೋಪಾಲ ಶೆಟ್ಟಿಯವರಿಗೆ ಅಭಿನಂದನೆಗಳ ಮಹಾಪೂರ

ಮುಂಬಯಿ: ಸೋಲಿಲ್ಲದ ಸರದಾರನೆಂದೇ ಪ್ರಸಿದ್ದಿಯಾಗಿರುವ, ಇದೀಗ ಎರಡನೇ ಬಾರಿ ಸಂಸದರಾಗಿ ತನ್ನ ಪ್ರತಿಸ್ಪರ್ಧಿ ಹಿಂದಿ ಚಲನಚಿತ್ರ ನಟಿ ಕಾಂಗ್ರೇಸ್ ನ ಉರ್ಮೀಳಾ ಮಾತೋಂನ್ಕರನ್ನು ನಾಲ್ಕೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಸೋಲಿಸಿದ ಮೂಲತ: ತುಳುನಾಡಿನವರಾದ ಉತ್ತರ ಮುಂಬಯಿಯ ಸಂಸದ ಗೋಪಾಲ ಶೆಟ್ಟಿ ಯವರನ್ನು ಮುಂಬಯಿ ಮಾತ್ರವಲ್ಲದೆ ನಾಡಿನ ತುಳು ಕನ್ನಡಿಗರು ಹಾಗೂ ಸ್ಥಳೀಯ ನಾಗರಿಕರು ಅಪಾರ ಸಂಖ್ಯೆಯಲ್ಲಿ ಅಭಿನಂದಿಸಿದ್ದಾರೆ.

ಗೋಪಾಲ ಶೆಟ್ಟಿಯವರು ಮುಂಬಯಿ ಬೋರಿವಲಿ ಪರಿಸರದಲ್ಲಿ ಮುಂಬಯಿಯ ಉಪಮೇಯರ ಆಗಿ, ಬಿಜೆಪಿ ಮುಂಬಯಿಯ ಅಧ್ಯಕ್ಷರಾಗಿ, ಶಾಸಕರಾಗಿ ಜನಪ್ರಿಯರು.

ಇಲ್ಲಿನ ಗೋಪಾಲ ಶೆಟ್ಟಿ ತುಳು ಕನ್ನಡಿಗರ ಅಭಿಮಾನಿ ಬಳಗದ ಪ್ರಮುಖರೂ, ಜನಪ್ರಿಯ ಹೋಟೇಲು ಉದ್ಯಮಿಯು ಆದ ಎರ್ಮಾಳು ಹರೀಶ್ ಶೆಟ್ಟಿಯವರು ಗೋಪಾಲ ಶೆಟ್ಟಿಯವರ ವಿಜಯೋತ್ಸವದಲ್ಲಿ ಪಾಲ್ಗೊಂಡು ಅಭಿನಂದಿಸುತ್ತಾ ಬಾರೀ ಅಂತರದಿಂದ ಗೋಪಾಲ ಶೆಟ್ಟಿಯವರನ್ನು ವಿಜಯಿಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.

ತನ್ನ ಕ್ಷೇತ್ರದ ಜನತೆಯ ಪರಿಶ್ರಮ ಹಾಗೂ ಅಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಗೋಪಾಲ ಶೆಟ್ಟಿಯವರು ಮತದಾರರನ್ನು ಅಭಿನಂದಿಸಿದ್ದಾರೆ.

 

More Images