ಸಾಹಿತಿಕ ವಿಮರ್ಶೆ - ಮುಂಬಯಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ

ಸಾಹಿತಿಕ ವಿಮರ್ಶೆ - ಮುಂಬಯಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ

Nov 30, 2018 03:22:11 PM (IST)
ಸಾಹಿತಿಕ ವಿಮರ್ಶೆ - ಮುಂಬಯಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ

ಮುಂಬೈ: ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ ಹಾಗೂ ಆಶಾವಾದಿ ಪ್ರಕಾಶನ ಜಂಟಿಯಾಗಿ ’ಸಾಹಿತಿಕ ವಿಮರ್ಶೆ’ಯ ರಾಷ್ಟ್ರೀಯ ಕಾರ್ಯಾಗಾರ ಈಚೆಗಗೆ ಮುಂಬೈ ’ಆತ್ಮ ದರ್ಶನ’ದಲ್ಲಿ ಜರುಗಿತು.

ಡಾ.ಜಯವಂತ ನಾಯಕ ಕಾರ್ಯದ ಅಧ್ಯಕ್ಷರಾಗಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಆರ್. ಪಿ. ನಾಯ್ಕ್, ಖ್ಯಾತ ಉಧ್ಯಮಿ ಬಾಬ್ ಶ್ರೀ ಆಲ್ಬರ್ಟ್ ಡಬ್ಲ್ಯೂ ಡಿ’ಸೋಜ ಹಾಗೂ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೊಂಕಣಿ ಕವಿ ಶ್ರೀ ಮೆಲ್ವಿನ್ ರೊಡ್ರಿಗಸ್ ಪ್ರಮುಖ ಅಥಿತಿಗಳಾಗಿದ್ದರು. 

ಪಯ್ಣಾರಿ.ಕೊಮ್ ಸಂಪಾದಕ ಶ್ರೀ ವಲ್ಲಿ ಕ್ವಾಡ್ರಸ್ ಅಜೆಕಾರ್, ಡಾ.ಅರವಿಂದ ಶ್ಯಾನ್‌ಭಾಗರು ಪ್ರಬಂಧ ಮಂಡಿಸಿದರು.   

ಲಾರೆನ್ಸ್ ಡಿ’ಸೋಜ ಕಮಾನಿ ಮಾತನಾಡಿ, ಎಲ್ಲಾ ಭಾಷೆಯ ಸಾಹಿತ್ಯಕ್ಕೂ ವಿಮರ್ಶೆಯ ಅವಶ್ಯಕತೆಯಿದೆ’ ಎಂದರು. 

ಆಶಾವಾದಿ ಪ್ರಕಾಶನದ ನಾಲ್ಕು ಕೊಂಕಣಿ ಪುಸ್ತಕಗಳ; ಕಾಳ್ಜಾಉಡಿ (ರೋಶುಬಾಬಾ ಬಾರ್ಕುರ್), ಚಾಬೂಕ್ ಆನಿ ಹೆರ್ ಕಥಾ (ರೋನಿ ಮೊಂತೆರೊ ಕಟಪಾಡಿ), ಪರ್ನೊ ರೂಕ್ ಆನಿ ತರ್ನಿ ವಾಲ್ (ಎವ್ರಿ ಪಾಂಗ್ಳಾ), ಶಿಮ್ಟಿ ಆನಿ ಹೆರ್ ಕಥಾ (ಸ್ಟೇನ್‌ರೊ ಅಜೆಕಾರ್) ಹಾಗೂ ’ನಮಾನ್ ತುಕಾ ಸೊಡ್ವೊಣ್ದಾರಾಚೆ ಮಾಯೆ’ ಎಂಬ ಸಂಗೀತ್ ಸಿಡಿಯ (ಬೆನ್ನಿ ಟೀಚರ್ ದುಭಾಯ್) ವಿಮೋಚನೆಯಾಯಿತು .ಲೇಖಕ ರೋನಿ ಮೊಂತೇರೊ ಕಟಪಾಡಿ ಹಾಗೂ ಬೆನ್ನಿ ಟೀಚರ್ ದುಭಾಯ್ ಇವರು ಮಾತನಾಡಿದರು.   

ವೇದಿಕೆಯಲ್ಲಿ ಜೋನ್ ಡಿ’ಸಿಲ್ವಾ, ಲಾರೆನ್ಸ್ ಕುವೆಲ್ಹೊ (ದಿವೊ ಸಂಪಾದಕರು), ಲಾರೆನ್ಸ್ ಡಿ’ಸೋಜ್ ಕಮಾನಿ, ವಂದನೀಯ ಚಾರ್ಲ್ಸ್ ವಾಸ್ ಎಸ್. ವಿ.ಡಿ., ರೊನಿ ಮೊಂತೇರೊ ಕಟಪಾಡಿ ಹಾಗೂ ಬೆನ್ನಿ ಟೀಚರ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಮೂರನೇ ಭಾಗದಲ್ಲಿ ವಿಲ್ಫಿ ರೆಬಿಂಬಸ್ ಸ್ಮಾರಕ ಪಯ್ಣಾರಿ-ವೀಜ್ ರಾಶ್ಟ್ರೀಯ ಮಟ್ಟದ ದ್ವಿ-ಲಿಪಿ ಕೋಂಕಣಿ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರವಿತ್ತರು. ಆರ್. ಎಸ್. ಭಾಸ್ಕರನ್ (ಕೊಚ್ಚಿ), ಶ್ರೀಮತಿ ಉರ್ಜಿತಾ ಭೊಬೆ (ಗೋವಾ), ಶ್ರೀ ಹಿಲರಿ ಡಿ’ಸಿಲ್ವಾ (ಪ್ರಸನ್ನ್ ನಿಡ್ಡೋಡಿ) ಮುಂಬಯ್, ಶ್ರೀಮತಿ ಬೆನ್ನಿ ಟೀಚರ್ (ದುಭಾಯ್) ಹಾಗೂ ಡಾ.ಅರವಿಂದ್ ಶ್ಯಾನ್‌ಭಾಗ್ (ಮಂಗಳುರು) ಇದ್ದರು.

 ಕೊಂಕಣಿ ಕವಿತಾವಾಚನ ಸ್ಪರ್ಧೆ ಜರಗಿದ್ದು ಇದರಲ್ಲಿ ಅತ್ಯುತ್ತಮ ಸಂಘಟನೆ ೨೦೧೮ - ಕಾಂದಿವಲಿ ಸಂಘಟನೆ (ಶ್ರೀಮತಿ ಹಿಲ್ಡಾ ಪಿರೇರಾ), ಅತ್ಯುತ್ತಮ ಸಂಘಟನೆ ೨೦೧೭ - ಜೆರಿಮೆರಿ (ಶ್ರೀಮತಿ ಫ್ಲೋರಾ ಕಲ್ಮಾಡಿ). 

ನಾಲ್ಕನೇ ಭಾಗದಲ್ಲಿ ಕು.ಫಿಲೋಮೆನಾ ಸಾಂಫ್ರಾನ್ಸಿಸ್ಕೊ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬಹುಭಾಶಾ ಕವಿಗೋಷ್ಟಿಯಲ್ಲಿ ಕವಿ ಮೆಲ್ವಿನ್ ರೊಡ್ರಿಗಸ್, ಆರ್. ಎಸ್. ಭಾಸ್ಕರನ್, ಉರ್ಜಿತಾ ಭೊಬೆ ಕೊಂಕಣಿ ಕವಿತೆಗಳನ್ನು, ಡಾ| ಗಿರಿಜಾ ಶಾಸ್ತ್ರಿ ಹಾಗೂ ಶ್ರೀ ವಿ. ಎಸ್. ಶ್ಯಾನ್‌ಭಾಗರು ಕನ್ನಡ ಕವಿತೆಗಳನ್ನು, ಶ್ರೀಮತಿ ರೀಟಾ ಆಲ್ಬುಕರ್ಕ್ ತುಳು ಕವಿತೆಯನ್ನು ಹಾಗೂ ಫಿಲೋಮೆನಾ ಸಾಂಫ್ರಾನ್ಸಿಸ್ಕೊ ಹಿಂದಿ ಕವಿತೆಯನ್ನು ಓದಿದರು. 

ಪ್ರಮುಖ ಅತಿಥಿಯಾಗಿದ್ದ ಆಲ್ಬರ್ಟ್ ಡಬ್ಲ್ಯೂ ಡಿ’ಸೋಜಾ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆರ್. ಪಿ. ನಾಯ್ಕ್ ಮಾತನಾಡಿದರು.