ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ

ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ

IS   ¦    Sep 10, 2018 04:57:49 PM (IST)
ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ

ಮುಂಬಯಿ: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ 19ನೇ ವಾರ್ಷಿ ಕೋತ್ಸವ ವು ಆಗಸ್ಟ್ ನಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಿತು. ಶ್ರೀಗಳು ಆಶ್ರೀರ್ವಚನ ನೀಡುತ್ತಾ, ಹಿರಿಯರ ಸೇವೆ ನಮ್ಮ ಧರ್ಮ. ವೃದ್ಧಾಶ್ರಮದ ಸಂತತಿ ನಮ್ಮಲ್ಲಿಲ್ಲ. ಉತ್ತಮ ಸಂಸ್ಕೃತಿ ನಮಗೆ ದೊರೆತರೆ ವೃದ್ಧಾಶ್ರಮ ನಿವಾರಣೆಯಾಗುತ್ತದೆ ಎಂದರು. ಸ್ವಾಮೀಜಿ ಹಾಗೂ ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಒಡಿಯೂರು ಕ್ಷೇತ್ರದ ಶ್ರೀ ಸಾಧ್ವಿ ಮಾತಾ ನಂದಮಯಿ ಅವರು ಮಾತನಾಡುತ್ತಾ, ಒಡಿಯೂರು ಕ್ಷೇತ್ರದಲ್ಲಿ ಗ್ರಾಮವಿಕಾಸ ಕೇಂದ್ರ ಹಾಗೂ ಸ್ವಸಹಾಯ ಸಂಘಟನೆಗಳ ಸದುಪಯೋಗವನ್ನು ಹೆಚ್ಚಿನ ಜನರು ಪಡೆಯುತ್ತಿದ್ದು, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಪ್ರಭಾವಿತಗೊಂಡಿದೆ.

ಬಂಟರ ಸಂಘ ಮುಂಬಯಿ ಯ ಅಧ್ಯಕ್ಷರಾದ ಪದ್ಮನಾಭ ಎಸ್‌. ಪಯ್ಯಡೆ, ಉಧ್ಯಮಿ ಬಿ. ವಿವೇಕ್‌ಶೆಟ್ಟಿ ಯವರು ಉಪಸ್ಥಿತರಿದ್ದು ಸ್ವಾಮೀಜಿಯವರ ಸಮಾಜ ಸೇವೆ ಬಗ್ಗೆ ಮಾತನಾಡಿದರು.


ಅತಿಥಿಗಳಾಗಿ ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ,ಬಂಟರ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ ಉಪಸ್ಥಿತರಿದ್ದು ಮಾತನಾದಿದರು. ಪುಣೆ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಶೆಟ್ಟಿ, ಒಡಿಯೂರು ಶ್ರೀ ಯುವ ಸೇವಾ ಬಳಗದ ವತಿಯಿಂದ ಡಾ| ಆದಿತ್ಯ ಕೃಷ್ಣ ಶೆಟ್ಟಿ, ಡಾ| ಜಾನಕಿ ಕೊಡ್‌ಕಣಿ ಉಪಸ್ಥಿತರಿದ್ದರು.


ಬಳಗದ ಉಪಾಧ್ಯಕ್ಷ ದಾಮೋದರ ಶೆಟ್ಟಿ ದಂಪತಿ ಶ್ರೀಗಳ ಪಾದುಕಾ ಪೂಜೆ ನೆರವೇರಿಸಿದರು. ಗುರುದೇವಾ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಂದ್ರಹಾಸ ರೈ ಬೊಳ್ನಾಡುಗುತ್ತು, ಗ್ರಾಮೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸ್ವಾಮೀಜಿ ಅವರ ದಿವ್ಯಹಸ್ತದಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಯುವ ವಿಭಾಗದ ಸುನಿಲ್‌ಶೆಟ್ಟಿ ಮತ್ತು ನ್ಯಾಯವಾದಿ ಕವಿತಾ ಧೀರಜ್‌ಶೆಟ್ಟಿ ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಭಿನಯ ಮಂಟಪ ಮುಂಬಯಿ ಮುಂಬಯಿ ಕಲಾವಿದರಿಂದ ದೇವು ಪೂಂಜ ನಾಟಕ ಪ್ರದರ್ಶನಗೊಂಡಿತು.