ಗೋರೆಗಾಂವ್ ನಲ್ಲಿ ರವಿ ರಾ. ಅಂಚನ್ ರಿಗೆ ಶ್ರದ್ಧಾಂಜಲಿ

ಗೋರೆಗಾಂವ್ ನಲ್ಲಿ ರವಿ ರಾ. ಅಂಚನ್ ರಿಗೆ ಶ್ರದ್ಧಾಂಜಲಿ

Nov 12, 2017 10:56:00 AM (IST)
ಗೋರೆಗಾಂವ್ ನಲ್ಲಿ ರವಿ ರಾ. ಅಂಚನ್ ರಿಗೆ ಶ್ರದ್ಧಾಂಜಲಿ

ಮುಂಬಯಿ : ಗೋರೆಗಾಂವ್ ಕರ್ನಾಟಕ ಸಂಘ ಮತ್ತು ವೀರಕೇಸರಿ ಕಲಾವೃಂದದ ಆಶ್ರಯದಲ್ಲಿ ನ. 10 ರಂದು ಮುಂಬಯಿಯ ಖ್ಯಾತ ಕನ್ನಡಿಗ, ಇತ್ತೀಚೆಗೆ ಅನಿರೀಕ್ಷಿತವಾಗಿ ಅಗಲಿದ ರವಿ ರಾ. ಅಂಚನ್ ರಿಗೆ ಶ್ರದ್ಧಾಂಜಲಿ ಸಭೆಯನ್ನು ಸಂಘದ ಸಭಾಗೃಹದಲ್ಲಿ ನಡೆಸಲಾಯಿತು.

1975 ರಿಂದ ನಿರಂತರವಾಗಿ ಗೋರೆಗಾಂವ್ ಕರ್ನಾಟಕ ಸಂಘ ದಲ್ಲಿ ಕ್ರೀಯಾಶೀಲರಾಗಿದ್ದ ರವಿ ರಾ. ಅಂಚನರು ಸಂಘದಲ್ಲಿನ ಸಾಹಿತ್ಯಕ ಕಾರ್ಯಕ್ರಮವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಹಾಗೂ ಸಂಘದ ಸದಸ್ಯರುಗಳ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪ್ರೊತ್ಸಾಹವನ್ನು ನೀಡುತ್ತಿದ್ದರು. ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಮಾತ್ರವಲ್ಲದೆ ಮುಂಬಯಿಯ ಹೆಚ್ಚಿನ ತುಳು ಕನ್ನಡಿಗರಿಗೆ ರವಿ ರಾ. ಅಂಚನರ ಮಾರ್ಗದರ್ಶನ ಅವಿಸ್ಮರಣೀಯ. ವೀರಕೇಸರಿ ಕಲಾವೃಂದಕ್ಕೂ ರವಿ ರಾ. ಅಂಚನರು ಬಹಳ ಹತ್ತಿರವಾಗಿದ್ದು ಕಲಾವೃಂದದ ಹೆಚ್ಚಿನ ಕಾರ್ಯಕ್ರಮಗಳಿಗೆ ಇವರ ಮಾರ್ಗದರ್ಶನವಿತ್ತು.

ಇನ್ನು ಮುಂದೆಯೂ ಸಂಘದಲ್ಲಿ ಇವರು ಹಮ್ಮಿಕೊಂಡ ಯೋಜನೆ ಪೂರೈಸಲಾಗುವುದು ಹಾಗೂ ಇವರ ಮಾರ್ಗದರ್ಶನದಂತೆ ಹಿಂದಿನಂತೆ ಮುಂದೆಯೂ ನಡೆದುಕೊಳ್ಳಲಾಗುವುದು ಹಾಗೂ ರವಿ ಅಂಚನರ ಹೆಸರು ಈ ಸಂಘದಲ್ಲಿ ಸದಾ ಉಳಿಯುವಂತಾಗಬೇಕು ಎಂದು ಗೋರೆಗಾಂವ್ ಕರ್ನಾಟಕ ಸಂಘ ಮತ್ತು ವೀರಕೇಸರಿ ಕಲಾವೃಂದದ ಹಿರಿಯ ಹಾಗೂ ಕಿರಿಯ ಸದಸ್ಯರು ಮತ್ತು ಅಭಿಮಾನಿಗಳು ರವಿ ರಾ. ಅಂಚನರಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸುತ್ತಾ ತಿಳಿಸಿದರು.

ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ಯಾರ್ ಮಾತನಾಡುತ್ತಾ ಗೋರೆಗಾಂವ್ ಕರ್ನಾಟಕ ಸಂಘ ಮತ್ತು ವೀರಕೇಸರಿ ಕಲಾವೃಂದಕ್ಕೆ ಇವರ ಯೋಗದಾನ ಬಹಳವಿತ್ತು. ಇವರ ಅಗಲಿಕೆಯ ದುಃಖವನ್ನು ಸಹಿಸಲು ಮುಂಬಯಿಯ ಎಲ್ಲಾ ಸಾಹಿತಿಗಳಿಗೂ, ಅಭಿಮಾನಿಗಳಿಗೂ ಇವರ ಮಕ್ಕಳಿಗೂ ದೇವರು ಶಕ್ತಿಯನ್ನು ಕರುಣಿಸಲಿ. ಇವರ ಇಬ್ಬರು ಪುತ್ರಿಯರಿಗೆ ತಮ್ಮ ಹೆತ್ತವರ ಅಗಲಿಕೆಯಿಂದಾಗುವ ಕೊರತೆಯಾಗದಂತಾಗಲು ಅವರ ಮನೆಯವರಿದ್ದರೂ ನಾವೆಲ್ಲರೂ ಒಂದಾಗಿ ಅವರಿಗೆ ಸದಾ ಪ್ರೋತ್ಸಾಹ ನೀಡೋಣ ಎಂದರು.

ಸಂಘದ ಮಾಜಿ ಅಧ್ಯಕ್ಷರೂ ವೀರಕೇಸರಿ ಕಲಾವೃಂದದ ಅಧ್ಯಕ್ಷರೂ ಆದ ಶಕುಂತಳಾ ಆರ್ ಪ್ರಭು ಮಾತನಾಡುತ್ತಾ ರವಿ ಅಂಚನರು ಯಾವಾಗಲೂ ಮಹಿಳೆಯರನ್ನು ಗೌರವದಿಂದ ಕಾಣುತ್ತಿದ್ದರು. ನನ್ನನ್ನು ಈ ಸಂಘದ ಅಧ್ಯಕ್ಷನನ್ನಾಗಿ ಮಾಡುವಲ್ಲಿ ಅವರ ಪ್ರೋತ್ಸಾಹವೇ ಕಾರಣ. ಎಂದರು.

ಬಿಲ್ಲವರ ಅಸೋಷಿಯೇಶನಿನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೋರೆಗಾಂವ್ ಕರ್ನಾಟಕ ಸಂಘ ದ ಮಾಜಿ ಅಧ್ಯಕ್ಷರುಗಳಾದ ವಿ. ಪಿ. ಕೋಟ್ಯಾನ್, ಎಸ್. ಎಂ. ಶೆಟ್ಟಿ, ಸುರೇಂದ್ರ ಸಾಲ್ಯಾನ್, ದೇವಳ್ಕುಂಜ ಭಾಸ್ಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮೀನಾ ಕಾಳಾವರ್, ಪತ್ರ ಕರ್ತ ಶ್ರೀನಿವಾಸ ಜೋಕಟ್ಟೆ, ಸಚ್ಚೀಂದ್ರ ಕೋಟ್ಯಾನ್, ಜಯಕರ ಪೂಜಾರಿ, ಕೇಶವ ಕೋಟ್ಯಾನ್, ಮೋಹನ್ ಮಾರ್ನಾಡ್, ಹೇಮಾ ಅಮೀನ್, ಪೇತ್ರಿ ವಿಶ್ವನಾಥ ಶೆಟ್ಟಿ, ಕೆ. ಎಂ. ಕೋಟ್ಯಾನ್, ಗುಣೋದಯ ಎಸ್. ಐಲ್, ಪದ್ಮಜಾ ಮನ್ನೂರು, ಸುಚಲತಾ ಕೋಟ್ಯಾನ್, ಡಾ. ಮಮತಾ ರಾವ್, ಗಾಯತ್ರಿ ರಾಮು, ಸುಗಂಧಿ ಹಳೆಯಂಗಡಿ ಮೊದಲಾದವರು ಮಾತನಾಡುತ್ತಾ ಮುಂಬಯಿ ಮಹಾನಗರದಲ್ಲಿ ತುಳು, ಕನ್ನಡವನ್ನು ಸಮಾಜಿಕವಾಗಿ ಹಾಗೂ ಸಾಹಿತ್ಯಕವಾಗಿ ಶ್ರೀಮಂತಗೊಳಿಸುವಲ್ಲಿ ರವಿ ರಾ. ಅಂಚನರ ಕೊಡುಗೆಯನ್ನು ವರ್ಣಿಸಿದರು. ಸಭಾಗೃಹದಲ್ಲಿ ಕಿಕ್ಕಿರಿದು ತುಂಬಿದ ನಗರದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ರವಿ ರಾ. ಅಂಚನರ ಅಭಿಮಾನಿಗಳು ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಇತ್ತಿಚೆಗೆ ನಿಧನರಾದ ಸಂಘದ ಸದಸ್ಯೆ ಶ್ರೀಮತಿ ಚೇತನಾ ಗಣೇಶ್ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.

 

More Images