ಉಡುಪಿ ಯುವಕ ಮಸ್ಕತ್ ನಲ್ಲಿ ಸಾವು

ಉಡುಪಿ ಯುವಕ ಮಸ್ಕತ್ ನಲ್ಲಿ ಸಾವು

YK   ¦    Dec 11, 2018 04:18:34 PM (IST)
ಉಡುಪಿ ಯುವಕ ಮಸ್ಕತ್ ನಲ್ಲಿ ಸಾವು

ಮಸ್ಕತ್ /ಉಡುಪಿ: ಮಸ್ಕತ್ ನಲ್ಲಿ ಕೆಲಸ ಮಾಡುತ್ತಿದ್ದ ಉಡುಪಿಯ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಡಿ.9ರಂದು ವರದಿಯಾಗಿದೆ.

ಮೃತರನ್ನು ಗುರುಪ್ರಸಾದ ಉಪಾಧ್ಯ(27) ಎಂದು ಗುರುತಿಸಲಾಗಿದೆ. ಈತ ಸೇಂಟ್ ಮೇರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪಿಯು ವಿದ್ಯಾಭ್ಯಾಸವನ್ನು ಶಿರ್ವ ಹಾಗೂ ಮಿಲಾಗ್ರೆಸ್ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ಪದವಿ ಶಿಕ್ಷಣವನ್ನು ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.

ಇವರು ಸ್ನೇಹ ಜೀವಯಾಗಿದ್ದು, ಚುರುಕಾದ ವ್ಯಕ್ತಿತ್ವನ್ನು ಹೊಂದಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದಿಲೀಪ್ ಕೊರಿಯಾ ಎಂಬವರು ಗುರುಪ್ರಸಾದ್ ಗೆ ಮಸ್ಕತ್ ನಲ್ಲಿ ಕೆಲಸವನ್ನು ಮಾಡಿಕೊಟ್ಟಿದ್ದರು. ಕಳೆದ 2 ವರ್ಷದಿಂದ ಅಕೌಟೆಂಟ್ ಆಗಿ ಮಸ್ಕತ್ ನಲ್ಲಿ ಕೆಲಸ ಮಾಡುತ್ತಿದ್ದರು.

ಗುರುಪ್ರಸಾದ್ ಎಂದಿನಂತೆ ಕೆಲಸಕ್ಕೆ ಬಾರದೆ ಇರುವುದನ್ನು ಗಮನಿಸಿದ ದಿಲೀಪ್ ಆತನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿರುವುದರಿಂದ ಗುರು ನಿದ್ದೆಗೆ ಜಾರಿರಬೇಕು ಎಂದು ದಿಲೀಪ್ ತಿಳಿದುಕೊಂಡಿದ್ದಾರೆ. ದಿಲೀಪ್ ಅವರು ಗುರು ರೂಮಿಗೆ ಬಂದಾಗ ಬಾಗಿಲನ್ನು ಲಾಕ್ ಮಾಡಲಾಗಿತ್ತು. ರೂಮಿನ ಒಳಗಡೆ ಗುರುವಿನಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ನಂತರ ಬಾಗಿಲನ್ನು ಒಡೆದು ನೋಡಿದಾಗ ಗುರು ಪ್ರಜ್ಞಾಹೀನವಾಗಿ ಮಂಚದ ಮೇಲಿದ್ದರು. ಆ ವೇಳೆಗಾಗಲೇ ಗುರು ಸಾವನ್ನಪ್ಪಿದ್ದರು.