ಮುಂಬಯಿ ವಿವಿ, ಮೈಸೂರು ಅಸೋಸಿಯೇಶನ್ ದತ್ತಿ ಉಪನ್ಯಾಸ

ಮುಂಬಯಿ ವಿವಿ, ಮೈಸೂರು ಅಸೋಸಿಯೇಶನ್ ದತ್ತಿ ಉಪನ್ಯಾಸ

HSA   ¦    Mar 10, 2018 03:04:19 PM (IST)
ಮುಂಬಯಿ ವಿವಿ, ಮೈಸೂರು ಅಸೋಸಿಯೇಶನ್ ದತ್ತಿ ಉಪನ್ಯಾಸ

ಮುಂಬಯಿ: ಮುಂಬಯಿ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ಅಸೋಸಿಯೇಶನ್ ಜಂಟಿಯಾಗಿ ಆಯೋಜಿಸಿದ್ದ ಮೈಸೂರು ಅಸೋಸಿಯೇಶನ್ ಬಮಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ-2018ರಲ್ಲಿ ಮಹಾಭಾರತದ ಕರ್ಣ ಎಂಬ ವಿಷಯದ ಕುರಿತಾಗಿ ಖ್ಯಾತ ಗಮಕಿ ಹಾಗೂ ವಿದ್ವಾಂಸ ಡಾ. ಜಯರಾಮರಾವ್ ಅವರು ಮಾತನಾಡಿದರು.

ಮಹಾಭಾರತದಲ್ಲಿ ಕರ್ಣನ ಪಾತ್ರ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಕರ್ಣನದ್ದು ಸಂಕೀರ್ಣವಾದ ಪಾತ್ರ. ತ್ಯಾಗ, ವೀರ, ನಿಷ್ಠೆಗೆ ಹೆಸರಾದ ಒಬ್ಬ ದುರಂತ ಜೀವಿ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜೆ.ಎ. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೈಸೂರು ಅಸೋಸಿಯೇಶನ್ ಅಧ್ಯಕ್ಷರಾದ ಕೆ. ಕಮಲಾ ಹಾಗೂ ಕಾರ್ಯದರ್ಶಿ ಡಾ. ಶಂಕರಲಿಂಗ ಅವರು ವಿ.ವಿ.ಗೆ ಐವತ್ತು ಸಾವಿರ ರೂ. ಚೆಕ್ ನ್ನು ಹಸ್ತಾಂತರಿಸಿದರು.