ಗೋರೆಗಾ೦ವ್ ಕರ್ನಾಟಕ ಸಂಘದ 60ನೇ ವಾರ್ಷಿಕ ಮಹಾಸಭೆ

ಗೋರೆಗಾ೦ವ್ ಕರ್ನಾಟಕ ಸಂಘದ 60ನೇ ವಾರ್ಷಿಕ ಮಹಾಸಭೆ

YK   ¦    Jun 05, 2018 11:13:17 AM (IST)
ಗೋರೆಗಾ೦ವ್ ಕರ್ನಾಟಕ ಸಂಘದ 60ನೇ ವಾರ್ಷಿಕ ಮಹಾಸಭೆ

ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ಕನ್ನಡಿಗರ ಅಭಿಮಾನದ ಸಂಘವಾಗಿದೆ. ಎಲ್ಲರೂ ಭಿನ್ನಾಭಿಪ್ರಾಯವಿಲ್ಲದೆ ಸಂಘದ ಘನತೆಯನ್ನು ಇನ್ನೂ ಹೆಚ್ಚಿಸಬೇಕಾಗಿದೆ. ವಜ್ರ ಮಹೋತ್ಸವವನ್ನಾಚರಿಸುತ್ತಿರುವ ಗೋರೆಗಾಂವ್ ಕರ್ನಾಟಕ ಸಂಘವು ವಜ್ರದಂತೆ ಇನ್ನೂ ಪ್ರಭಲವಾಗಿ ಬೆಳೆಯಲಿ, ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ಯಾರ್ ಅವರು ನುಡಿದರು.

ಗೋರೆಗಾಂವ್ ಕರ್ನಾಟಕ ಸಂಘದ 60ನೇಯ ವಾರ್ಷಿಕ ಮಹಾಸಭೆಯು ಜೂನ್ 3 ರಂದು ಸಂಜೆ ಸಂಘದ ಬಾರ್ಕೂರು ರುಕ್ಮಿಣೀ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಶೆಟ್ಟಿ ಪಯ್ಯಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ಒಂದಾಗಿ ಈ ಸಂಘದ ವಜ್ರಮಹೋತ್ಸವನ್ನು ಅದ್ದೂರಿಯಿಂದ ಆಚರಿಸೋಣ ಎಂದರು.

ಸಂಘದ ನೂತನ ಅಧ್ಯಕ್ಷರಾಗಿ ದೇವಲ್ಕುಂಜ ಭಾಸ್ಕರ್ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದು, ರಮೇಶ ಶೆಟ್ಟಿ ಪಯ್ಯಾರ್ ಸಂಘದ ಪಾರುಪತ್ಯಗಾರರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಾರಾಯಣ ಆರ್. ಮೆಂಡನ್ ಪುನರಾಯ್ಕೆಯಾಗಿದ್ದಾರೆ.


ಮಾಜಿ ಅಧ್ಯಕ್ಷ ಎಸ್. ಎಮ್. , ವಜ್ರಮಹೋತ್ಸವ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷೆ ಉಷಾ ಶೆಟ್ಟಿ ಮಾತನಾಡಿದರು.

ವಜ್ರಮಹೋತ್ಸವ ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷರಾದ ಜಿ. ಟಿ. ಆಚಾರ್ಯ ಮತ್ತು ಸೆಲಬ್ರೇಶನ್ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಸುರೇಂದ್ರ ಸಾಲ್ಯಾನ್ ಮಾತನಾಡುತ್ತಾ ಸಂಘದ ವಜ್ರಮಹೋತ್ಸ ಸಮಾರಂಭದ ಬಗ್ಗೆ ಸೂಕ್ತ ಮಾಹಿತಿ ನೀಢಿದರು.