ದುಬೈ ಪಟ್ಲ ಸಂಭ್ರಮ 2019ಕ್ಕೆ ಭರದ ಸಿದ್ಧತೆ

ದುಬೈ ಪಟ್ಲ ಸಂಭ್ರಮ 2019ಕ್ಕೆ ಭರದ ಸಿದ್ಧತೆ

Oct 16, 2019 08:36:45 AM (IST)
ದುಬೈ ಪಟ್ಲ ಸಂಭ್ರಮ 2019ಕ್ಕೆ ಭರದ ಸಿದ್ಧತೆ

ದುಬೈ: ಅ. 18ರ ಶುಕ್ರವಾರ ದುಬೈ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಹಮ್ಮಿಕೊಂಡ ಪಟ್ಲ ಸಂಭ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಈ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟ ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್, ದುಬೈಯ ಪ್ರಖ್ಯಾತ ವಾಣಿಜ್ಯೋದ್ಯಮಿಗಳಾದ ರೊನಾಲ್ಡ್ ಕೊಲಾಸೊ ಮತ್ತು ಡಾ.ಬಿ.ಆರ್. ಶೆಟ್ಟಿಯವರು ಭಾಗವಹಿಸಲಿದ್ದಾರೆ.

ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಸರಿಯಾಗಿ 3.30 ಗಂಟೆಗೆ ಪ್ರವೇಶ ದ್ವಾರ ತೆರೆಯಲಿದೆ. ಕಾರ್ಯಕ್ರವಮದಂಗವಾಗಿ ನಡೆವ ಹಾಸ್ಯ ವೈಭವದಲ್ಲಿ ದಿನೇಶ್ ಶೆಟ್ಟಿಗಾರ್ ಕೋಡಪದವು ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ತಮ್ಮ ಹಾಸ್ಯ ರಸಾಯನದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.

ಗಾನ ಗಂಧರ್ವ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟರ ಸಾರಥ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ನಮ್ಮ ತಾಯ್ನಾಡಿನ ಗಣ್ಯ ಅತಿಥಿ ಕಲಾವಿದರೆಲ್ಲ ಈಗಾಗಲೇ ದುಬೈ ತಲುಪಿದ್ದಾರೆ. ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಭಾಗವತಿಕೆಯಲ್ಲಿ, ಪದ್ಮನಾಭ ಉಪಾಧ್ಯಾಯರು ಮತ್ತು ದಯಾನಂದ ಶೆಟ್ಟಿಗಾರ್ ಚೆಂಡೆ-ಮದ್ದಳೆಯಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆಸಲಿದ್ದಾರೆ ಅತಿಥಿ ಕಲಾವಿದರಾದ ದಿನೇಶ ಶೆಟ್ಟಿಗಾರ್ ಕೋಡಪದವು. ಮುರಳೀಧರ ಶೆಟ್ಟಿಗಾರ್ ಕನ್ನಡಿಕಟ್ಟೆ, ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಸಚಿನ್ ಅಮೀನ್ ಉದ್ಯಾವರ ಮೊದಲಾರವರು ಪ್ರಮುಖ ಪಾತ್ರದಲ್ಲಿ ನಿಮ್ಮನ್ನೆಲ್ಲಾ ರಂಜಿಸಲಿದ್ದಾರೆ. ಗಂಗಾಧರ ಡಿ.ಶೆಟ್ಟಿಗಾರ್ ಮತ್ತು ನಿತಿನ್ ಕುಂಪಲ ಪ್ರಸಾಧನ ಕಲಾವಿದರಾಗಿ ಭಾಗವಹಿಸಲಿದ್ದಾರೆ.

ನೂತನ ವೇಷಭೂಷಣ- ರಂಗಸ್ಥಳಗಳು ಸಿದ್ಧವಾಗಿವೆ. ಆಕರ್ಷಕ ವಿದ್ಯುದ್ದೀಪಾಲಂಕಾರ- ಪುಪ್ಪಲಂಕಾರಗಳಿಂದ ಉಯ್ಯಾಲೆ, ದೃಶ್ಯಾವಳಿಗಳು ಪ್ರೇಕ್ಷಕರ ಕಣ್ಮನ ತಣಿಸಲಿವೆ. ದುಬೈ ಯಕ್ಷಗಾನ ತರಗತಿಯ ಸಹಕಾರ-ಸಹಬಾಗಿತ್ವದೊಂದಿಗೆ ನಡೆಯಲಿರುವ ಈ ಪಾವನ-ಪುಣ್ಯ ಯಕ್ಷಗಾನ ಕಥಾನಕ ಪ್ರದರ್ಶನ “ಮಹಿಷಮರ್ಧಿನಿ ಜಗಜ್ಜನನಿ” ದುಬೈ ಯಕ್ಷಪ್ರಿಯರ ಮನ ತಣಿಸಲಿದೆ. ಸರಿ ಸುಮಾರು 50ಕ್ಕೂ ಮಿಕ್ಕಿದ ಸ್ಥಳೀಯ ಹಿಮ್ಮೇಳ-ಮುಮ್ಮೇಳ ಕಲಾವಿದರು ಸೇರಿ ಸರಿಯಾಗಿ ಒಟ್ಟು 85 ಪಾತ್ರಗಳನ್ನು ರಂಗದಲ್ಲಿ ನಿಮ್ಮ ಮುಂದೆ ಪ್ರದರ್ಶಿಸಲಿದ್ದಾರೆ.. ಅದ್ದೂರಿಯ ಈ ಪ್ರದರ್ಶನದಲ್ಲಿ ಭಾಗವಹಿಸಿ ತನು-ಮನ-ಧನಗಳ ಸಹಕಾರ ನೀಡಬೇಕೆಂದು, ಸಂಘಟಕ- ಸಂಯೋಜಕ ಕೊಟ್ಟಿಂಜ ದಿನೇಶ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಘಟಕ ಅಧ್ಯಕ್ಷರಾದ ಸರ್ಮೋತ್ತಮ ಶೆಟ್ಟಿ ಅಬುದಾಭಿ ಮತ್ತು ಕಾರ್ಯದರ್ಶಿ ವಿಠಲ ಶೆಟ್ಟಿಯವರು ಉಪಸ್ಥಿತರಿದ್ದರು.

More Images