ಶಾರದಾ ಅರ್ಟ್ ಮಂಜೇಶ್ವರ ತಂಡದ ಮುಂಬಯಿ ಪ್ರವಾಸಕ್ಕೆ ಚಾಲನೆ

ಶಾರದಾ ಅರ್ಟ್ ಮಂಜೇಶ್ವರ ತಂಡದ ಮುಂಬಯಿ ಪ್ರವಾಸಕ್ಕೆ ಚಾಲನೆ

HSA   ¦    Nov 20, 2018 09:22:46 AM (IST)
ಶಾರದಾ ಅರ್ಟ್ ಮಂಜೇಶ್ವರ ತಂಡದ ಮುಂಬಯಿ ಪ್ರವಾಸಕ್ಕೆ ಚಾಲನೆ

ಮುಂಬಯಿ: ಗಡಿನಾಡಲ್ಲಿ ತುಳು ರಂಗಭೂಮಿಯಲ್ಲಿ ಹೊಸ ದಾಖಲೆಯನ್ನು ಬರೆದ ಶಾರದಾ ಆರ್ಟ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ತುಳು ಹಾಸ್ಯ ಹಾಗು ಸಮಾಜಿಕ ನಾಟಕಗಳನ್ನುನೀಡಿ ಪ್ರಸಿದ್ದಿಯನ್ನು ಪಡೆದಿದೆ.
ನ. 17ರಿಂದ ಕೆಲವು ದಿನಗಳ ಕಾಲ ಮುಂಬಯಿ ಪ್ರವಾಸ ಕೈಗೊಂಡಿರುವ ಈ ತಂಡದ ಈ ಸಲದ ಮೊದಲ ಪ್ರದರ್ಶನವು ನಲಾಸೋಪಾರ ಗ್ಯಾಲಾಕ್ಷಿ ಹೋಟೆಲ್ ಸಭಾಂಗಣದಲ್ಲಿ ಬಂಟ್ಸ್ ಸಂಘ ವಸಾಯಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಇವರ ವ್ಯವಸ್ಥಾಪಕದಲ್ಲಿ ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ನಡೆಯಿತು.

ಇದರ ಉದ್ಘಾಟನೆಯನ್ನು ದಹಿಸರ್ ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಾದ ಗುರುಶಂಕರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಶಿಧರ ಶೆಟ್ಟಿ, ಜಯಂತ್ ಪಕ್ಕಳ, ರಮೇಶ್ ವಿ ಶೆಟ್ಟಿ ಕಾಪು, ಹರೀಶ್ ಶೆಟ್ಟಿ ಗುರ್ಮೆ, ಪಾಂಡು ಶೆಟ್ಟಿ, ಗಣೇಶ್ ಸುವರ್ಣ, ವಸಂತ್ ಶೆಟ್ಟಿ ವಿರಾರ್, ನಯನ ಆರ್ ಶೆಟ್ಟಿ, ಸುಮಂಗಳ ಕಣಂಜಾರು, ಶಂಕರ್ ಗಾಣಿಗ ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿಜಯ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು. ಕೃಷ್ಣ ಜಿ ಮಂಜೇಶ್ವರ ಮಾರ್ಗದರ್ಶನದಲ್ಲಿ ಚಲನಚಿತ್ರ ನಟ ಕುಸಲ್ದ ರಸೆ ನವೀನ್ ಪಡೀಲ್ ನಿರ್ದೇಶಿಸಿದ ಲಯನ್ ಸುಂದರ್ ರೈ ಮಂದಾರ ಅಭಿನಯಿಸಿದ ಜೆ ಪಿ ತಮ್ಮಿನಾಡು ರಚಿಸಿದ ಬಂಜಿಗ್ ಆಕೊಡ್ಚಿ ನಾಟಕ ಪ್ರದರ್ಶನಗೊಂಡಿತು.

ವರದಿ: ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್

More Images