ಕೆಸಿಎಫ್ ವತಿಯಿಂದ ಡಿ.1ರಂದು ಪ್ರವಾದಿ ಜನ್ಮದಿನೋತ್ಸವ ಆಚರಣೆ

ಕೆಸಿಎಫ್ ವತಿಯಿಂದ ಡಿ.1ರಂದು ಪ್ರವಾದಿ ಜನ್ಮದಿನೋತ್ಸವ ಆಚರಣೆ

Nov 27, 2017 06:28:09 PM (IST)
ಕೆಸಿಎಫ್ ವತಿಯಿಂದ ಡಿ.1ರಂದು ಪ್ರವಾದಿ ಜನ್ಮದಿನೋತ್ಸವ ಆಚರಣೆ

ಶಾರ್ಜಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅನಿವಾಸಿ ಮುಸ್ಲಿಂ ಕನ್ನಡಿಗರ ಒಕ್ಕೂಟ. ಜಿಸಿಸಿ ಸಹಿತ ಮಲೇಷ್ಯಾ ಹಾಗೂ ಲಂಡನ್ ರಾಷ್ಟ್ರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಾ ಬಂದಿರುವ ಕೆಸಿಎಫ್ ಸಂಘಟನೆಯು ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಹಾಗೂ ಎಸ್ ವೈ ಎಸ್ ಸಂಘಟನೆಗಳ ಅಧೀನ ಸಂಘನೆಯಾಗಿದ್ದು ಸಾದಾತ್ ವಂಶಜರ ಹಾಗೂ ವಿದ್ವತ್ ವಿದ್ವಾಂಸರುಗಳ ಮತ್ತು ಸಂಘಟನಾ ನಿಪುಣರ ಉಪದೇಶ ನಿರ್ದೇಶಾನುಸಾರ ಕಾರ್ಯಾಚರಿಸುತ್ತಾ ಬಂದಿದೆ.

ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರಸ್ತುತ ಸಂಘಟನೆಯನ್ನು ಕೆಸಿಎಫ್ ಇಂಟರ್ ನ್ಯಾಷನಲ್ ಕೌನ್ಸಿಲ್ ನಿಯಂತ್ರಿಸುತ್ತಿದ್ದು ಲಕ್ಷಕ್ಕೂ ಮಿಕ್ಕ ಕ್ರಿಯಾಶೀಲ ಸದಸ್ಯರನ್ನು ಹೊಂದಿರುವ ಕರ್ನಾಟಕದ ಉತ್ತಮ ಶಿಸ್ತಿನ ಸಿಪಾಯಿಗಳು ಪ್ರಸ್ತುತ ಸಂಘಟನೆಯಲ್ಲಿ ಸದಸ್ಯತನವನ್ನು ಪಡೆದಿದ್ದು ಸಂಘಟನೆಯ ಅಭಿವೃದ್ಧಿಯ ಹಿಂದಿರುವ ರಹಸ್ಯವಾಗಿದೆ.

ಕೆಸಿಎಫ್ ಇಂದು ಗಲ್ಫ್ ರಾಷ್ಟ್ರಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಂಘಟನೆಯಾಗಿದ್ದು, ಯುವಕರಲ್ಲಿ ಇಸ್ಲಾಮಿನ ಸಂಸ್ಕೃತಿಯ ಮೌಲ್ಯಯುತ ಸಿದ್ಧಾಂತಗಳನ್ನು ಭದ್ರಪಡಿಸಿ ಕೊಳ್ಳುವ ಉದ್ದೇಶದಿಂದ ರೂಪೀಕರಿಸಲಾಗಿದೆ. ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನಃ ಸ್ಥಾಪಿಸಲು ಪೂರಕವಾಗುವ ಯೋಜನೆಗಳನ್ನು ಹಮ್ಮಿಕೊಂಡು ಪ್ರಸ್ತುತ ಸಂಘಟನೆಯು ಅಭಿವೃದ್ಧಿಯತ್ತ ಮುನ್ನೇರುತ್ತಿದೆ. ಕಳೆದ ವರ್ಷಗಳಲ್ಲಿ ಹಲವಾರು ಸಾಂಘಿಕ ಚಟುವಟಿಕೆಗಳು, ಶೈಕ್ಷಣಿಕ ನೆರವು, ದಅವಾ ಸಮಾಲೋಚನೆಗಳು, ತರಬೇತಿ ಶಿಬಿರಗಳು ಶೈಕ್ಷಣಿಕ / ಆಧ್ಯಾತ್ಮಿಕ ಪ್ರವಾಸಗಳು ಹಾಗೂ ಇನ್ನಿತರ ಹಲವಾರು ಜೀವ ಕಾರುಣ್ಯ ಚಟುವಟಿಕೆಗಳನ್ನು ಸಂದರ್ಭಾನುಸಾರ ಕೆಸಿಎಫ್ ನಡೆಸುತ್ತಾ ಬಂದಿದೆ.

ಯುಎಇ ರಾಷ್ಟ್ರೀಯ ಸಮಿತಿಯ ನಿರ್ದೇಶನದಡಿಯಲ್ಲಿ ಕೆಸಿಎಫ್ ಶಾರ್ಜಾ ಝೋನ್, ಸಮುದಾಯಕ್ಕೆ ಉತ್ತಮ ಸೇವೆಗಳನ್ನು ಒದಗಿಸುವ ನಿರಂತರ ಪ್ರಯತ್ನಗಳ ಅಂಗವಾಗಿ ಡಿಸೆಂಬರ್ 1, 2017ರಂದು ಇಬ್ನ್ ಸೀನಾ ಇಂಗ್ಲಿಷ್ ಹೈಸ್ಕೂಲ್, ಅಲ್ ಷಾಬಾ ಹತ್ತಿರದ ಕ್ರಿಕೆಟ್ ಕ್ರೀಡಾಂಗಣ ಶಾರ್ಜಾದಲ್ಲಿ "MEHFIL-E-MUSTAFA" ಪ್ರವಾದಿ ಮುಹಮ್ಮದ್ ನಬಿ (ಸ ಅ) ರವರ 1492ನೇ ಜನ್ಮದಿನೋತ್ಸವ ಮತ್ತು ಯುಎಇಯ 46ನೇಯ ರಾಷ್ಟ್ರೀಯ ದಿನಾಚರಣೆ ಸಮಾರಂಭವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದು ಪ್ರವಾದಿ (ಸ ಅ) ರವರು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಅನುಗ್ರಹವಾಗಿ ಜನಿಸಿದ ಪ್ರವಾದಿಯಾಗಿರುತ್ತಾರೆ ಎಂಬ ಸಂದೇಶವನ್ನು ಸಾರುವ ಹಾಗೂ ಪ್ರವಾದಿ (ಸ ಅ) ರವರ ಜನ್ಮ, ಜೀವನ, ಸಾಧನೆಗಳು ಮತ್ತು ಪರಂಪರೆಯನ್ನು ಮಾನವ ಸಮೂಹಕ್ಕೆ ತಲುಪಿಸುವ ಸಲುವಾಗಿಯೂ ಹಾಗೂ ಪ್ರತಿಯೊಂದು ರಾಷ್ಟ್ರವು ಆಯಾ ರಾಷ್ಟ್ರಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಕೊಂಡಾಡುವಾಗ ಯುಎಇ ಯು ತನ್ನ ರಾಷ್ಟ್ರೀಯ ದಿನಾಚರಣೆಯನ್ನು ಬಹಳ ಆವೇಶ ಹಾಗೂ ಅತ್ಯುತ್ಸಾಹದಿಂದ ಆಚರಿಸುತ್ತಾ ಬಂದಿದ್ದು ಅನಿವಾಸಿಗರಾದ ನಮ್ಮೆಲ್ಲರಿಗೂ ಯುಎಇ ರಾಷ್ಟ್ರೀಯ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಕೊಂಡಾಡುವುದು ನಮ್ಮೆಲ್ಲರ ಕರ್ತ್ಯವ್ಯವೂ ಭಾದ್ಯತೆಯೂ ಆಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸಮಾರಂಭ ಗಳನ್ನು ಜಂಟಿಯಾಗಿ ಹಮ್ಮಿಕೊಳ್ಳಲು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಿರ್ಧರಿಸಿದ್ದು ಸಮಾರಂಭದ ಯಶಸ್ವಿಗೆ ಅನಿವಾರ್ಯವಾಗಿರುವ ಕಾರ್ಯ ಚಟುವಟಿಕೆಗಳು ಪ್ರಗತಿಯ ಹಾದಿಯಲ್ಲಿದೆ.

ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಗಲ್ ಕಡಲುಂಡಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕೇರಳ ರಾಜ್ಯ ಎಸ್ ವೈ ಎಸ್ ಅಧ್ಯಕ್ಷ ಮೌಲಾನಾ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಹಾಗೂ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ನಿರ್ದೇಶಕ ಡಾ. ಅಬ್ದುಲ್ ಹಕೀಮ್ ಅಜ್ಹರಿ ಪ್ರಸ್ತುತ ಸಮಾರಂಭದಲ್ಲಿ ಮುಖ್ಯ ಬಾಷಣಗಾರರಾಗಿ ಪಾಲ್ಗೊಳ್ಳಲಿದ್ದಾರೆ.

ಕೆ.ಸಿ.ಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ, ಜನಾಬ್ ಎಂ.ಎಸ್. ಮುಹಮ್ಮದ್, ಜನಾಬ್ ಇಕ್ಬಾಲ್ ಮಂಗಳೂರು, ಜನಾಬ್ ಮುಹಮ್ಮದ್ ಅಲಿ ಸಖಾಫಿ, ಶೇಖ್ ಕುನ್ವಾಲ್ ಮುನಿರ್, ಶೇಖ್ ಅಮಲ್ ಮುನಿರ್, ಜನಾಬ್ ಝಕರಿಯ್ಯಾ ಜೊಕಟ್ಟೆ, ಜನಾಬ್ ಸೈಯದ್ ಹಫಿಝುಲ್ಲಾ, ಜನಾಬ್ ಅಬ್ದುಲ್ ನಾಸರ್ ಥಾಯಲ್, ಜನಾಬ್ ಶೇಖ್ ಸಮೀರ್ ಮತ್ತು ಸ್ಥಳೀಯ ಅರಬ್ ನಾಯಕರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೆತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುಎಇಯಾದ್ಯಂತ ಕೆಸಿಎಫ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

More Images